ಹುಲ್ಲೂರು ಶ್ರೀನಿವಾಸ ಜೋಯಿಸರ ಕುರಿತು ಚಿತ್ರಣ ನೀಡುವ ಕೃತಿ ಇದಾಗಿದೆ. ಇದರಲ್ಲಿ ಆರಂಭ ಕಾಲ, ಸ್ವಾತಂತ್ಯ್ರ ಹೋರಾಟ-‘ಮೈಸೂರು ಚಲೋ’ ಚಳವಳಿ, ಜೋಯಿಸರು, ಮನೆ ಮತ್ತು ಮಕ್ಕಳು, ಇತಿಹಾಸ ಸಂಶೋಧನೆ, ಸಾಧನೆ, ಅಪರೂಪದ ‘ಮಾರ್ಗದರ್ಶಿ, ಸ್ನೇಹ, ಪ್ರೋತ್ಸಾಹಕ, ಪತ್ರಕರ್ತ, ಸಮಾಜ ಸೇವಕ, ವಸ್ತು ಸಂಗ್ರಹಾಲಯ ಸ್ಥಾಪನೆ, ಭಾಷಣ ಇತಿಹಾಸ ಪ್ರಚಾರ, ಸರಳತೆ, ಸಜ್ಜನಿಕೆ ಕನ್ನಡ ಪ್ರೇಮ, ಕಡೆಯ ದಿನಗಳು ಜೋಯಿಸರ ಮತ್ತು ಅವರ ಸಂಶೋಧನೆ ಬಗೆಗೆ ಗಣ್ಯರ ಅಭಿಪ್ರಾಯಗಳು ಮುಂತಾದ ವಿಷಯಗಳ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ.
ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 650 ಅಪ್ರಕಟಿತ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ. ಹಾಗೂ ಹಲವಾರು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಡಾ. ಬಾ.ರಾ. ಗೋಪಾಲ್ ಶಾಸನತಜ್ಞ ಪ್ರಶಸ್ತಿ ( 2004) ಮತ್ತು ಸಂಶೋಧನ ಶ್ರೀ ಪ್ರಶಸ್ತಿ (2016) ನೀಡಿ ಇತಿಹಾಸ ಅಕಾಡೆಮಿ ಡಾ. ಬಿ.ರಾಜಶೇಖರಪ್ಪ ಅವರನ್ನು ಗೌರವಿಸಿದೆ. ಅಲ್ಲದೆ ಕನ್ನಡ ಮೋಡಿ ಲಿಪಿಯ ಹಸ್ತಪ್ರತಿ ಸಂಪಾದನ ಕಾರ್ಯಕ್ಕಾಗಿ ಶಿವಯೋಗ ಮಂದಿರದಿಂದ ಕುಮಾರಶ್ರೀ ಪ್ರಶಸ್ತಿ ದೊರೆತಿದೆ. ...
READ MORE