ಶ್ರೀರಾಮಕೃಷ್ಣ ಪರಮಹಂಸರ ಬದುಕು-ಅನುಭಾವದಾಮೃತ-ಸಂದೇಶ ಕುರಿತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಬರೆದ ಕೃತಿ-ಶ್ರೀ ರಾಮಕೃಷ್ಣ. ಪರಮಹಂಸರ ಉಪದೇಶ ಕುರಿತು ಉಪನ್ಯಾಸ ನೀಡುವಂತೆ ಆಶ್ರಮದವರು ನೀಡಿದ ಆಹ್ವಾನವು, ನಂತರ ಅದು ಸುದೀರ್ಘ ಲೇಖನವಾಗಿ ಪುಸ್ತಕ ರೂಪು ತಳೆದಿದೆ ಎಂದು ಲೇಖಕರು ಹೇಳಿದ್ದಾರೆ.
ಪರಮಹಂಸರ ಜೀವನ ನಡೆದು ಬಂದ ದಾರಿ, ಅವರ ಉಪದೇಶವು ಬೀರುತ್ತಾ ಸಾಗಿದ ಪ್ರಭಾವ, ವಿವೇಕಾನಂದರ ಭೇಟಿ, ಯಾತ್ರೆಗಳು ಸೇರಿದಂತೆ ಕೆಲ ಮಹತ್ವದ ಹಾಗೂ ಪವಾಡ ಎನ್ನಿಸುವ ಘಟನೆಗಳ ವಿವರ, ಪರಮಹಂಸರ ಜೀವನಕ್ಕೆ ಸಂಬಂಧಿಸಿದ ಕೆಲ ಮಹತ್ವದ ಘಟನೆಗಳು ಹೀಗೆ ಈ ಕೃತಿಯು ಅವರ ಜೀವನಚಿತ್ರದ ಉತ್ತಮ ಹಾಗೂ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಕಥೆಯನ್ನು ಅತ್ಯಂತ ನವಿರಾಗಿ ಹೇಳುವ ಮಾಸ್ತಿ ಅವರ ಶೈಲಿಯು ಈ ಕೃತಿಯ ರಚನೆಯಲ್ಲೂ ದಟ್ಟವಾಗಿ ಇರುವುದನ್ನು ಕಾಣಬಹುದು.
‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...
READ MORE