ಎಂ.ವಿ. ವಾಸುದೇವರಾವ್‌

Author : ಎನ್ಕೆ ಹನುಮಂತಯ್ಯ

Pages 48

₹ 30.00




Year of Publication: 2001
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಬಾಲ್ಯದಿಂದಲೇ ನಾಟಕ, ಯಕ್ಷಗಾನ, ಅಭಿನಯದ ಗೀಳನ್ನು ಅಂಟಿಸಿಕೊಂಡಿದ್ದ ವಾಸುದೇವರಾವ್  ಅವರ ಬದುಕು ಕಷ್ಟಗಳ, ಹೋರಾಟಗಳ ಸರಮಾಲೆ. ಶ್ರೀನಿವಾಸ ಅಯ್ಯಂಗಾರರ ಕಂಪನಿ ಬಿಟ್ಟು ಗುಬ್ಬಿ ಕಂಪನಿಗೆ ಸೇರಿದಾಗಿನಿಂದ ವಾಸುದೇವರಾವ್‌ ಅವರ ರಂಗೋತ್ಕರ್ಷ ನಿರಂತರವಾಗಿ ಸಾಗಿತು. ಶಿಸ್ತು, ಪ್ರಯತ್ನ, ನಿಷ್ಠೆಗಳನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ ಅವರು, ಗುಬ್ಬಿ ಕಂಪನಿಯ ಮೇರು ಸ್ತಂಭಗಳಲ್ಲಿ ಒಬ್ಬರಾಗಿದ್ದರು. ಇವರ ಕುರಿತು ಎನ್.ಕೆ. ಹನುಮಂತಯ್ಯ ಅವರು ಬರೆದಿದ್ದಾರೆ.

About the Author

ಎನ್ಕೆ ಹನುಮಂತಯ್ಯ

ತಿಪಟೂರು ತಾಲ್ಲೂಕಿನ ನಾಗರಘಟ್ಟದಲ್ಲಿ ಜನಿಸಿದ್ದ (1974) ಎನ್.ಕೆ. ಹನುಮಂತಯ್ಯ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿದ್ದ ಎನ್ಕೆ ಕಿರಿಯ ವಯಸ್ಸಿನಲ್ಲಿಯೇ (2010) ತೀರಿಹೋದರು. ಹಿಮದ ಹೆಜ್ಜೆ (ಕವನ ಸಂಕಲನ- 2001), ಚಿತ್ರದ ಬೆನ್ನು (ಕವನ ಸಂಕಲನ-  2006), ಎಂ.ವಿ. ವಾಸುದೇವರಾವ್ (ವ್ಯಕ್ತಿಚಿತ್ರ- 2000), ಕ್ರಾಂತಿ ವಸಂತ (ಬಿ.ಬಸವಲಿಂಗಪ್ಪನವರ ವ್ಯಕ್ತಿಚಿತ್ರ), ಜಲಸ್ತಂಭ (ನಾಟಕ- 2005) ಪುಸ್ತಕಗಳನ್ನು ಪ್ರಕಟಿಸಿದ್ದರು. ಊರು ಕೇರಿ ಪತ್ರಿಕೆಯ ಸಂಪಾದಕರು ಆಗಿದ್ದರು. ...

READ MORE

Related Books