ಗಂಡು ಹೆಣ್ಣಾಗುವ ಪರಿ ಸಂಜೀವಪ್ಪ ದಾಸರ ಅವರಂತಹ ಅಭಿಜಾತ ಕಲಾವಿದರಿಗೆ ಸಾಧ್ಯ. ಸ್ತ್ರೀಯರೇ ನಾಚುವಂತಹ ಸ್ತ್ರೀಪಾತ್ರ ಅವರದು! ಗದಗದ ಡಾ. ಪುಟ್ಟರಾಜ ಗವಾಯಿಗಳ ನಾಟಕ ಕಂಪನಿಯಲ್ಲಿ ನಲವತ್ತಕ್ಕೂ ಅಧಿಕ ವರ್ಷ ಸ್ತ್ರೀ ಪಾತ್ರ ಮಾಡಿಯೇ ಮನೆ ಮಾತಾದವರು. ಈ ಕಲಾವಿದರ ಬದುಕು ಕುರಿತು ಲೇಖಕ ರಮೇಶ ಗಬ್ಬೂರ ಅವರು ವಿವರಿಸಿದ್ದಾರೆ.
ಹಾಡುಗಾರ, ಕವಿ ರಮೇಶ ಗಬ್ಬೂರ ಅವರು ಜನಿಸಿದ್ದು 1968 ಜೂನ್ 5ರಂದು. ಹುಟ್ಟೂರು ರಾಯಚೂರು ಜಿಲ್ಲೆಯ ಗಬ್ಬೂರ. ಪ್ರಸ್ತುತ ಗಂಗಾವತಿಯ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕೃಷಿ ಹಾಗೂ ಸಾಮಾಜಿಕ ಚಳವಳಿಯಲ್ಲಿಯೂ ಸಕ್ರಿಯರಾಗಿರುವ ಇವರು ಜಾಗೃತ ಗೀತೆ ರಚನೆ ಹಾಗೂ ಹಾಡುಗಾರಿಕೆಯಲ್ಲಿಯೂ ತೊಡಗಿಕೊಂಡಿದ್ದಾರೆ. ಗೂನು ಬೆನ್ನಿನ ಗದ್ದೆ, ಅಲೆಮಾರಿಯ ಹಾಡು, ಗರೀಬ್ ಗಜ಼ಲ್, ಸಂಜೀವಪ್ಪ ಗಬ್ಬೂರ, ಒಲಿದಂತೆ ಹಾಡುವೆ, ಗಬ್ಬೂರ್ ಗಜ಼ಲ್ ಹಾಗೂ ಕಾಮ್ರೆಡ್ ಬಸವಣ್ಣ ಇವರ ಪ್ರಮುಖ ಕೃತಿಗಳು. ...
READ MORE