ಪ್ರೀತಿ, ಸೌಹಾರ್ದದ ಕವಿತೆಗಳ ಮೂಲಕ ಚಿರಪರಿಚಿತರಾದ ಅಮೃತ ಪ್ರೀತಂ ಅವರ ಕುರಿತು ಸಂಗಾತಿ ಇಮ್ರೋಜ್ ಬಿಚ್ಚಿಟ್ಟ ನೆನಪುಗಳನ್ನು ಲೇಖಕಿ ರೇಣುಕಾ ನಿಡಗುಂದಿ ಅವರು ಎಳೆಎಳೆಯಾಗಿ ಓದುಗರಿಗೆ ನೀಡಿದ್ದಾರೆ.
ಅಮೃತಾ ಅವರೊಂದಿಗೆ ಕಳೆದ ನೆನಪುಗಳು, ಒಡನಾಟ, ಅವರ ಕವಿತೆಗಳ ಜೊತೆಗಿನ ಬಾಂಧವ್ಯದ ಕುರಿತು ಈ ಕೃತಿಯು ಕಟ್ಟಿಕೊಡುತ್ತದೆ. ರೇಣುಕಾ ಅವರ ಮೌನದಲ್ಲಿ ಎದೆಯ ತುಂಬಾ ಅಮೃತ -ಇಮ್ರೂಜರಿಗಾಗಿ ಬರೆದ ಕವಿತೆಯ ಸಾಲುಗಳು ಓದಿಗಾಗಿ: ಬಾಪ್, ವೀರ್, ದೋಸ್ತ್ ತೇ ಖಾವಿಂದ್ ಕಿಸೆ ಲಫ್ಜ್ ದಾ ಕೋಯಿ ನಹೀ ರಿಶ್ತಾ... ಉಜ್ ಜದೋಂ ಮೇ ತೆನೂ ತಖಿಂಯಾ ಸಾರೆ ಅಖ್ಖರ್ ಗುರ್ಹೆ ಹೋ ಗಯೇ (ಅಪ್ಪ, ಅಣ್ಣ, ಗೆಳೆಯ ಮತ್ತು ಗಂಡ ಯಾರಿಗೂ ಬರವಣಿಗೆಯೊಂದಿಗೆ ಯಾವ ಸಂಬಂಧವೂ ಇಲ್ಲ, ಆದರೆ, ನಿನ್ನನ್ನು ನೋಡಿದ ಕ್ಷಣ ಎಲ್ಲ ಶಬ್ದಗಳೂ ಅರ್ಥಪೂರ್ಣವಾದವು!)
ರೇಣುಕಾ ನಿಡಗುಂದಿಯವರು ಮೂಲತಹ ಧಾರವಾಡದವರು. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ, ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ, ದೆಹಲಿ ಕರ್ನಾಟಕ ಸಂಘದ 'ಮುಖವಾಣಿ 'ಅಭಿಮತ' ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ, ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ " ರಾಜಧಾನಿಯಲ್ಲಿ ಕರ್ನಾಟಕ" ಪುಸ್ತಕವನ್ನು ಸಂಪಾದಿಸಿದ್ದು ಅನೇಕ, ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಮಾಸಿಕಗಳಲ್ಲಿ ಪ್ರಕಟಗೊಂಡಿವೆ. 'ಓ ಮನಸೇ' ದೈಮಾಸಿಕ ಪತ್ರಿಕೆಯಲ್ಲಿ 'ರಾಜಧಾನಿ ಮೇಲ್' ಅಂಕಣ ಬರೆಹ ಬರೆಯುತ್ತಿದ್ದರು. ಬಿಡುಗಡೆಯಾದ ಕೃತಿಗಳು - ಮೊದಲ ಕವನ ಸಂಕಲನ " ಕಣ್ಣ ಕಣಿವೆ" 2008 ( ಪ್ರಗತಿ ಗ್ರಾಫಿಕ್ಸ್), “ದಿಲ್ಲಿ ಡೈರಿಯ ...
READ MORE