ಡಿ.ವಿ ಗುರುಪ್ರಸಾದ್ ಅವರ ಕೃತಿ ಧರ್ಮಾತ್ಮ. ಈ ಕೃತಿಯಲ್ಲಿ ಕರ್ನಾಟಕ ಕಂಡ ಮಹತ್ವದ ಮತ್ತು ವಿಶಿಷ್ಟ ರಾಜಕೀಯ ವ್ಯಕ್ತಿತ್ವ ಧರ್ಮಸಿಂಗ್ ಅವರದು, ಅವರನ್ನು ಬಹಳ ಹತ್ತಿರದಿಂದ ನೋಡಿದ್ದ ನಿವೃತ್ತ ಡಿ.ಜಿ.ಪಿ ಡಾ.ಡಿ.ವಿ.ಗುರುಪ್ರಸಾದ್, ಅವರ ಜತೆಗಿನ ತಮ್ಮ ಒಡನಾಟದ ವಿವರಗಳನ್ನು ಈ ಪುಸ್ತಕದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ. ಈ ಕೃತಿಯು ರಾಜ್ಯದ ರಾಜಕೀಯ ಚರಿತ್ರೆಗೆ ಒಂದು ಮಹತ್ವದ ಕೊಡುಗೆಯಾಗಿದ್ದು ಒಂದು ಪ್ರಮುಖ ಆಕರ ಗ್ರಂಥವಾಗಲಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಸೌಜನ್ಯ, ಸಭ್ಯತೆ, ಒಳ್ಳೆಯತನಗಳುಳ್ಳ ಧರ್ಮಸಿಂಗ್‌ರ ಅವರಿಗೆ ಸಂದ, ಸಲ್ಲುತ್ತಿರುವ ಅತ್ಯುತ್ತಮ ಶ್ರದ್ಧಾಂಜಲಿ, ನುಡಿಚಿತ್ರವಾಗಿರುವ ಈ ಪುಸ್ತಕವು ಕಾದಂಬರಿಯಂತೆ ಒಂದೇ ದಿಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ ಎಂದು ಹಿರಿಯ ಪತ್ರಕರ್ತ ದೇವು ಪತ್ತಾರ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...
READ MOREhttps://vistaranews.com/attribute-227688/2023/02/05/sunday-read-new-kannada-book-extract-on-dharma-singh-by-dv-guruprasad/