ಹಾಸನಜಿಲ್ಲೆಯ ಬಸವಾಪಟ್ಟಣ ಗ್ರಾಮದಲ್ಲಿ ಡಾ. ಎ.ಜಿ. ಸುಬ್ಬರಾವ್ ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸಿದರು. ಎರಡು ತಲೆಮಾರಿನ ಜನ ಅವರ ಸರಳ ಸುಲಭಚಿಕಿತ್ಸೆಯ ಫಲಾನುಭವಿಗಳು. ಜತೆಗೆ ಜನರನ್ನು ಸಂತೋಷವಾಗಿಟ್ಟಿದ್ದು ಅವರ ನಿರಂತರ ಹಾಸ್ಯಲಹರಿ. ಸ್ವಾತಂತ್ರ್ಯ ಹೋರಾಟಗಾರ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನತಂತ್ರದ ಪರವಾದ ಹೋರಾಟಗಾರ; ಅದಕ್ಕಾಗಿ ಸೆರೆಮನೆಯನ್ನು ಕಂಡರು. ಸಂಘಟಕ, ಸಮಾಜಸೇವಕ, ಪತ್ರಿಕೆಗಳಿಗೆ ದೀರ್ಘಕಾಲ ಬರೆದರು. ಪುಸ್ತಕಗಳೂ ಪ್ರಕಟವಾದುವು. ಹಾಸ್ಯ, ವಿಡಂಬನೆ, ಚಿಂತನೆ, ಮುಪ್ಪುರಿಗೊಂಡುದು ಅವರ ಲೇಖನಗಳ ಲಕ್ಷಣ. ರಾಷ್ಟ್ರವಾದಿ, ಕಲಾವಿದ, ಭಾಷಣಕಾರ, ರೋಗಚಿಕಿತ್ಸಕ ಹೇಗೋ ಹಾಗೇ ಸಮಾಜ ಚಿಕಿತ್ಸಕ, ರಾಷ್ಟ್ರಚಿಕಿತ್ಸಕ. ಎಲೆಮರೆಯ ಕುಸುಮವಾಗಿಯೇ ಕೊನೆಗೊಂಡ ಅವರಿಗೆ ಅರ್ಪಿಸಿದ ಸ್ಮರಣ ಸಂಪುಟ.
©2025 Book Brahma Private Limited.