ಇರುಳ ಕಳೆದ ಬೆಳಕು

Author : ಬಿ. ಪ್ರಭಾಕರ ಶಿಶಿಲ

Pages 260

₹ 200.00




Year of Publication: 2020
Published by: ಷರಾ ಪ್ರಕಾಶನ
Address: ಡಾ. ಲೀಲಾಧರ ದೋಳ, ಪ್ರಾಂಶುಪಾಲರು, ಕೆ.ವಿ.ಜಿ. ಆಯುರ್ವೇದ ಕಾಲೇಜು, ಅಂಬಟೆ ಅಡ್ಕ, ಸುಳ್ಯ, ದಕ್ಷಿಣ ಕನ್ನಡ- 574239

Synopsys

‘ಇರುಳ ಕಳೆದ ಬೆಳಕು’ ಡಾ.ಕುರುಂಜಿ ವೆಂಕಟ್ರಮಣ ಗೌಡರ ಒಡನಾಟದ ನೆನಪುಗಳು. ಲೇಖಕ ಬಿ. ಪ್ರಭಾಕರ ಶಿಶಿಲ ಅವರು ರಚಿಸಿರುವ ವ್ಯಕ್ತಿಚಿತ್ರಣ. ಲೇಖಕರು ಈ ಕೃತಿಯ ಕುರಿತು ‘ನಾಡಿನ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳ ಓರ್ವ ಎತ್ತರದ ನೇತಾರ, ಕುರುಂಜಿ ವೆಂಕಟರಮಣ ಗೌಡರ ಜತೆಗಿನ ತನ್ನ ಸಂಪರ್ಕ ಒಡನಾಟಗಳ ಘಟನೆಗಳನ್ನು ನಿರೂಪಿಸಿ ಆ ಮೂಲಕ ಒಂದು ವ್ಯಕ್ತಿಚಿತ್ರಣವನ್ನು ರೇಖಿಸುವ ಈ ಗ್ರಂಥವು- ಪರಿಚಯ, ಅಭಿನಂದನಾದಿಗಳಿಗಿಂತ ಭಿನ್ನವಾಗಿದ್ದು, ಒಂದು ರೀತಿಯಲ್ಲಿ ಆ ಬಗೆಯ ಗ್ರಂಥಗಳು ಹೇಳಲಾಗುದುದನ್ನು ಹೇಳುತ್ತದೆ. ಈ ಕಾರಣಕ್ಕೂ, ಗುಣಮಟ್ಟದಿಂದಲೂ ಈ ಕೃತಿ ಅತ್ಯಂತ ಸ್ವಾಗತಾರ್ಹ’ ಎಂದು ಹೇಳಿದ್ದಾರೆ.

ಕಟ್ಟಿಕೊಳ್ಳುವ ತವಕ, ಒರೆವೆನೀ ಕಥಾಮೃತವ, ಯಕ್ಷ ರಂಗಸ್ಥಲದಿ, ಮಾಂಗಲ್ಯ ತಂತುನಾ ಹೇನ, ಬರೆಯದೆ ಬರೆಯಿಸಿದೆ, ಎನಿತು ಸಂಭ್ರಮವೊ, ಸಪ್ತಮಂ ದೈವ ಚಿಂತನಂ, ಮುನಿಸು ತರವೆ, ಎಲ್ಲೂ ಸಲ್ಲುವರಯ್ಯ, ನೆನಪಿನಾಗಸದ ಚಂದಿರ ಲೇಖನಗಳ ಜೊತೆಗೆ ಚಿತ್ರಸ್ಮೃತಿಗಳು ದಾಖಲಾಗಿವೆ. ಅನುಬಂಧ ಭಾಗದಲ್ಲಿ ಇದು ಇರುಳ ಕಳೆದ ಬೆಳಕು, ಸಂಶೋಧಕರ ಸಹಾಯಕ್ಕೆ, ಕೃತಿಕಾರನ ಸಂಕ್ಷಿಪ್ತ ಪರಿಚಯ, ಕೃತಿಕಾರನ ಸೃಜನಶೀಲ ಕೃತಿಗಳು ಎಂಬ ಬರೆಹಗಳು ಸಂಕಲನಗೊಂಡಿವೆ.

About the Author

ಬಿ. ಪ್ರಭಾಕರ ಶಿಶಿಲ
(21 December 1953)

ಲೇಖಕ ಡಾ. ಪ್ರಭಾಕರ ಶಿಶಿಲ ಅವರು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಸಾಹಿತ್ಯದತ್ತ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಅರ್ಥಶಾಸ್ತ್ರದ ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ. ಕೃತಿಗಳು:  ಮತ್ಸ್ಯಗಂಧಿ, ಗಗ್ಗರ, ಬಾರಣೆ, ಗುಜರಿ ಅದ್ದಿಲಿಚ್ಚನ ಜಿಹಾದಿಯ, ಕೊಡಗಿನ ಐತಿಹ್ಯ ಕಥೆಗಳು, ಬೆಟ್ಟದಾ ಮೇಲೊಂದು, ಕಪಿಲಳ್ಳಿಯ ಕತೆಗಳು, ಜಲಲ ಜಲಧಾರೆ, ದೊಡ್ಡ ವೀರ ರಾಜೇಂದ್ರ, ಕೊಡಗಿನ ಕತೆಗಳು.  ಶಿಶಿಲರನ್ನೇ ಕುರಿತು ಅನೇಕ ಗ್ರಂಥಗಳು ಪ್ರಕಟವಾಗಿವೆ . ಸುವರ್ಣ ಅಭಿನಂದನಾ ಸ್ಮರಣಿಕೆ, ಸಾಹಿತ್ಯ ಶಿಶಿಲ: ಶಿಶಿಲರ ಸಮಗ್ರ ಸಾಹಿತ್ಯ ವಿಮರ್ಶೆ, ಶಿಶಿಲರ ಜೀವನ ಮತ್ತು ಸಾಧನೆಗಳು, ಪ್ರಭಾಕರ ಶಿಶಿಲರ ಸಾಹಿತ್ಯ ಕುರಿತು ಡಾ. ಮೋಹನ ಕುಮಾರ ...

READ MORE

Related Books