ಹೈದರಾಬಾದ್ ಕರ್ನಾಟಕ ಪ್ರದೇಶದಿಂದ ರಂಗಭೂಮಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಗುಬ್ಬಿ ವೀರಣ್ಣ ರಂಗಪ್ರಶಸ್ತಿಯನ್ನು ಪಡೆದ ಏಕೈಕ ನಾಟಕಕಾರ ಎಂದರೆ ಎಲ್.ಬಿ.ಕೆ. ಆಲ್ದಾಳ. ಪ್ರಾಥಮಿಕ ಶಾಲೆಯನ್ನೂ ಬರೋಬ್ಬರಿ ಓದದಿದ್ದರೂ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಶ್ರೇಯಸ್ಸು ಎಲ್.ಬಿ.ಕೆ. ಆಲ್ದಾಳ ಅವರಿಗೆ ಸಲ್ಲುತ್ತದೆ. ಪ್ರಸ್ತುತ ಕೃತಿಯಲ್ಲಿ ಆಲ್ದಾಳರ ಕುರಿತು ಲೇಖಕ ಮಹಿಪಾಲ ರೆಡ್ಡಿ ಮುನ್ನೂರು ಅವರು ನೀಡಿದ್ದಾರೆ.
ಕವಿ, ಕತೆಗಾರ ಮಹಿಪಾಲರೆಡ್ಡಿ ಮುನ್ನೂರು ಅವರು ಸೇಡಂನಲ್ಲಿ 1971ರ ನವೆಂಬರ್ 18 ರಂದು ಜನಿಸಿದರು. ಸಾಹಿತ್ಯ, ನಾಟಕ, ಪತ್ರಿಕೋದ್ಯಮ, ಸಿನಿಮಾ, ಚಿತ್ರಕಲೆ ಅವರ ಆಸಕ್ತಿಯ ಕ್ಷೇತ್ರ. ಮೂರು ಕವನ ಸಂಕಲನ, ಒಂದು ಕಥಾ ಸಂಕಲನ, ಐದು ಅಂಕಣ ಬರಹಗಳ ಸಂಕಲನ, 3 ಮಾಧ್ಯಮ ಸಂಬಂಧಿತ ಕೃತಿಗಳು, ಒಂದು ನಾಟಕ, ಒಂದು ಮಕ್ಕಳ ಕವನ ಸಂಕಲನ, ಎರಡು ಚರಿತ್ರೆ, 6 ಸಂಪಾದನೆ ಸೇರಿದಂತೆ 37 ಪುಸ್ತಕಗಳ ಪ್ರಕಟವಾಗಿವೆ. ‘ಲಕ್ಕಿ ನಂಬರ್, ಸಾಕ್ಷಿಕಲ್ಲು, ಜೋಕುಮಾರಸ್ವಾಮಿ, ಅಳಿಯ ದೇವರು, ಸಾಹೇಬರು ಬರುತ್ತಾರೆ’ ಮುಂತಾದ ನಾಟಕಗಳಲ್ಲಿ, ಮೂರು ಧಾರಾವಾಹಿಗಳಲ್ಲಿ , ಐದು ಸಿನಿಮಾ ಗಳಲ್ಲಿ, ದೂರದರ್ಶನ ನಾಟಕಗಳಲ್ಲಿ ಹಾಗೂ ...
READ MORE