ಜೆ. ಕೃಷ್ಣಮೂರ್ತಿ ಹೆಸರಿನ ರಹಸ್ಯ ಕುರಿತು ಮಂಜುಶಾ ಆಮಡೆಕರ್ ಅವರು ಮರಾಠಿಯಲ್ಲಿ ಬರೆದ ಕೃತಿಯನ್ನು ಲೇಖಕಿ ಮಾಲತಿ ಮುದಕವಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಜೆ. ಕೃಷ್ಣಮೂರ್ತಿ ಅವರು ಜನಿಸಿದ ಕೂಡಲೇ ಅವರ ಕುಂಡಲಿಯನ್ನು ಒಬ್ಬ ಒಳ್ಳೆಯ ಜ್ಯೋತಿಷಿಯ ನೋಡಿ, ಈ ಹುಡುಗ ಮುಂದೆ ಬಹು ಮಹತ್ವದ ವ್ಯಕ್ತಿಯಾಗುತ್ತಾನೆ. ಎಂದು ಅವನ ಭವಿಷ್ಯದ ಬಗ್ಗೆ ನುಡಿದಿದ್ದರು. ಮುಂದೆ 14 ವರ್ಷಗಳ ನಂತರ ಥಿಯಾಸಾಫಿಕಲ್ ಸೊಸೈಟಿಗಾಗಿ ಅನೇಕ ವರ್ಷಗಳವರೆಗೆ ಸಣ್ಣ ಮಕ್ಕಳ ಶಿಷ್ಯತ್ವಕ್ಕಾಗಿ ಸಿದ್ಧಗೊಳಿಸಲೆಂದು ಹುಡುಕಾಡುವಾಗ ಲೆಡ್‍ಬೀಟರ್‍ರವರು ಅವನನ್ನು ನೋಡಿದರು. ಅವರು ಇದುವರೆಗೂ ಇಷ್ಟು ಅದ್ಭುತವಾದ ತೇಜಸ್ಸಿನ ವಲಯವನ್ನು ನೋಡಿಯೇ ಇರಲಿಲ್ಲ.
ಈಗ ಇಷ್ಟು ವರ್ಷಗಳ ನಂತರವೂ ಜನರಿಗೆ ನಿಗೂಢವಾಗಿಯೇ ಇದ್ದಾರವರು! ಈ ಮಹಾತ್ಮರನ್ನು ಯಾವ ವರ್ಗಕ್ಕೆ ಸೇರಿಸುವುದು? ಸಂತ ಎನ್ನಬಹುದೇ, ಮಹಾತ್ಮ ಎನ್ನಬಹುದೇ, ವಿಚಾರವಂತ ಎನ್ನಬಹುದೇ, ತತ್ವ ಚಿಂತಕ ಎನ್ನಬಹುದೇ, ಲೇಖಕ ಎನ್ನಬಹುದೇ, ಕವಿ ಎನ್ನಬಹುದೇ, ಜಗದ್ಗುರು ಎನ್ನಬಹುದೇ, ಸಮಾಜ ಸುಧಾರಕ ಎನ್ನಬಹುದೇ, ಮನಸ್ವೀ ಎನ್ನಬಹುದೇ, ಜ್ಞಾನಿ ಎನ್ನಬಹುದೇ, ಏನು ಎನ್ನಬೇಕು? ಇವರು ಏನಾಗಿದ್ದರು? ಇಡೀ ಜಗತ್ತಿನ ಜನರೆಲ್ಲರ ಮನಸ್ಸಿನ ಮೇಲೆ ತಮ್ಮ ಎಂದೂ ಮಸುಕಾಗದಂತಹ ಇಂಥ ಗುರುತನ್ನು ಬಿಟ್ಟು ಹೋದರಲ್ಲ! 1986ನೇ ಇಸ್ವಿಯಲ್ಲಿ ಇವರು ತಮ್ಮ ಭೌತಿಕ ಶರೀರವನ್ನು ಬಿಟ್ಟು ಹೋದರು ನಿಜ. ಇಂದಿಗೂ ಅವರ ತತ್ವ ಜ್ಞಾನದ ಹಾಗೂ ಅದಕ್ಕಿಂತ ಹೆಚ್ಚಾಗಿ ಅವರ ಮನಸ್ಸಿನ ಜ್ಞಾನದ ಆಳವನ್ನು ಅರಿಯುವ, ಅವರ ವ್ಯಕ್ತಿತ್ವವನ್ನು ಅರಿಯುವ ಇಚ್ಛೆಯೇ ಇದೆ.
ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ. ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...
READ MORE