ಸಾಕ್ರೆಟೀಸನ ಕೊನೆಯ ದಿನಗಳು

Author : ಎ.ಎನ್. ಮೂರ್ತಿರಾವ್

Pages 234

₹ 140.00




Year of Publication: 2010
Published by: ಡಿ.ವಿ.ಕೆ. ಮೂರ್ತಿ ಪ್ರಕಾಶನ
Address: 1498/1, ರಾಮಯ್ಯ ರಸ್ತೆ, ಕೃಷ್ಣಮೂರ್ತಿಪುರಂ, ಮೈಸೂರು-570004.

Synopsys

ಗ್ರೀಸ್ ದೇಶದಲ್ಲಿ ಜನಿಸಿದ್ದ ಶ್ರೇಷ್ಠ ತತ್ವಜ್ಞಾನಿ ಸಾಕ್ರೆಟೀಸನ ಕುರಿತ ಕೃತಿ-'ಸಾಕ್ರೆಟೀಸನ ಕೊನೆಯ ದಿನಗಳು’  ಸಾಕ್ರೆಟೀಸನ ತಂದೆ ಒಬ್ಬ ಶಿಲ್ಪಿ ಹೆಸರು ಸಾಫ್ರೋನಿಸ್ಕಸ್, ಅವನ ತಾಯಿ ಫೀನಾರಿಟಿ. ಇವಳು ಸೂಲಗಿತ್ತಿ. ಸಾಕ್ರೆಟೀಸನು ಸ್ವಲ್ಪ ದಿನ ಶಿಲ್ಪವೃತ್ತಿಯನ್ನು ಅಭ್ಯಾಸ ಮಾಡಿದ್ದನು. ಕ್ರಿ.ಪೂ. 432ರಿಂದ ಈಚೆಗೆ ಪೊಟಿಡಿಯ, ಡೀಲಿಯಂ, ಆಂಫಿಪೊಲಿಸ್ ಎಂಬ ಸ್ಥಳಗಳಲ್ಲಿ ನಡೆದ ಯುದ್ಧಗಳಲ್ಲಿ ಸಾಕ್ರಟೀಸನು ಸೈನಿಕನಾಗಿ ಯುದ್ಧ ಮಾಡಿದ್ದನು. ಆಗ ಅವನು ಅಸಾಧಾರಣವಾದ ಧೈರ್ಯ ಪರಾಕ್ರಮಗಳನ್ನೂ ಕಷ್ಟಸಹಿಷ್ಣುತೆಯನ್ನೂ ತೋರಿದ್ದಲ್ಲದೆ, ಪೊಟಿಡಿಯ ಯುದ್ಧದಲ್ಲಿ ಗಾಯಪಟ್ಟು ಶತ್ರುಗಳ ಕೈಯಿಂದ ಹತನಾಗುವುದರಲ್ಲಿದ್ದ ಆಲ್ಕಿಬಿಯೆಡೀಸನ ಪ್ರಾಣವನ್ನುಳಿಸಿದನು. ಸುಮಾರು ಇದೇ ಕಾಲದಲ್ಲಿ ಅರಿಸ್ಟೋಫೆನೀಸನು ’ಮೇಘಗಳ” ಎಂಬ ಹಾಸ್ಯ ನಾಟಕ ಬರೆದು ಅದರಲ್ಲಿ ಸಾಕ್ರೆಟೀಸನನ್ನು ಜನರ ದ್ವೇಷಕ್ಕೂ ತಿರಸ್ಕಾರಕ್ಕೂ ಗುರಿಮಾಡಿದನು. ಆ ನಾಟಕದಲ್ಲಿ ಬರುವ ಸಾಕ್ರೆಟೀಸನು ಒಬ್ಬ ಭೌತಶಾಸ್ತ್ರಾಭ್ಯಾಸಿ. ಸ್ಯೂಸ್ ಮೊದಲಾದ ದೇವತೆಗಳು ಸ್ವರ್ಗಚ್ಯುತರಾದರೆಂದೂ, ಅವರ ಸ್ಥಾನದಲ್ಲಿ ಮೇಘ, ಈಥರ್ ಮೊದಲಾದ ದೇವತೆಗಳು ಆಳುತ್ತಿರುವರೆಂದೂ, ಅವನು ಜನರಿಗೆ ತಿಳಿಸುತ್ತಾನೆ. ಆದರೆ, ನಿಜವಾದ ಸಾಕ್ರೆಟೀಸನಿಗೆ ಭೌತಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಪ್ರಕೃತಿಯ ಮತ್ತು ವಿಶ್ವದ ಸ್ವರೂಪವನ್ನು ತಿಳಿಯುವುದು ಹಾಗಿರಲಿ. ’ನಿನ್ನನ್ನು ನೀನು ತಿಳಿದಿ ಕೋ” ಎಂದು ಅವನು ಬೋಧಿಸುತ್ತಿದ್ದನು. ಇಂತಹ ತತ್ವಜ್ಞಾನಿ ಸಾಕ್ರೆಟೀಸನ ಕೊನೆಯ ದಿನಗಳ ಕುರಿತು ಈ ಕೃತಿ ರಚಿತವಾಗಿದೆ.

ಈ ಕೃತಿಯು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ 1985 ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತ್ತು.

About the Author

ಎ.ಎನ್. ಮೂರ್ತಿರಾವ್
(18 June 1900 - 23 August 2003)

ಲಲಿತ ಪ್ರಬಂಧ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದ ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್  ವಿಮರ್ಶಕರೂ ಆಗಿದ್ದರು. ವೈಚಾರಿಕ ಗ್ರಂಥ ‘ದೇವರು’ ಮೂಲಕ ಜನಪ್ರಿಯರಾದ ಮೂರ್ತಿರಾವ್ ಅವರು 1900ರ ಜೂನ್ 18ರಂದು ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು. ತಂದೆ ಎಂ.ಸುಬ್ಬರಾವ್ ಮತ್ತು ತಾಯಿ ಪುಟ್ಟಮ್ಮ. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ 1913ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ಬಿ.ಎ. ಪದವಿ (1922), ಎಂ.ಎ. ಪದವಿ (1924) ಪಡೆದರು. ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ (1924), ಮೈಸೂರು ವಿಶ್ವವಿದ್ಯಾಲಯದಲ್ಲಿ ...

READ MORE

Related Books