ಲೇಖಕ ಹಾಲತಿ ಸೋಮಶೇಖರ ಅವರ ಕೃತಿ-ಲಂಕೇಶ್ ಹೇಗಿದ್ದರು. ಕನ್ನಡ ಪತ್ರಿಕೋದ್ಯಮದಲ್ಲಿ ಪಿ. ಲಂಕೇಶ್ ಅವರು ತಮ್ಮ ಲಂಕೇಶ್ ವಾರಪತ್ರಿಕೆಯ ಮೂಲಕ ವಿಶಿಷ್ಟ ಛಾಪು ಮೂಡಿಸಿದವರು. ಒಂದರ್ಥದಲ್ಲಿ ಪತ್ರಿಕೋದ್ಯಮದ ಸ್ವತಂತ್ರ ವಿಚಾರ, ದಿಟ್ಟತನಗಳಿಗೆ ಮಾದರಿಯಾದವರು. ಇಂತಹ ಮಹನೀಯರ ಕುರಿತು ಲೇಖಕರು ಬರೆಹಗಳನ್ನು ಬರೆದಿದ್ದೇ ಈ ಕೃತಿ.
ಖ್ಯಾತ ಕತೆಗಾರ-ಪತ್ರಕರ್ತ ಪಿ. ಲಂಕೇಶ್ ಅವರ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿರುವ ಡಾ. ಹಾಲತಿ ಸೋಮಶೇಖರ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹಾಲತಿಯವರು. 1963ರ ಫೆಬ್ರುವರಿ 25ರಂದು ಜನಿಸಿದ ಅವರು ಎಂ.ಎ., ಪಿಎಚ್.ಡಿ., ಎಂ.ಎಡ್. ಮಾಡಿ ಶಿಕ್ಷಣಾಧಿಕಾರಿ ಆಗಿದ್ದಾರೆ. ಪಿ. ಲಂಕೇಶ, ಮಹಿಳಾ ಚಳವಳಿ, ಸ್ತ್ರೀಪರ, ಓದುವ ಸುಖ, ಸಾಯೋಆಟ-ವಿಮರ್ಶೆ (ವಿಮರ್ಶೆ) ಅವರ ಪ್ರಕಟಿತ ಕೃತಿಗಳು. ಪಿ. ಲಂಕೇಶ ಸಾಹಿತ್ಯ ಅವರ ಪಿಎಚ್.ಡಿ. ಮಹಾಪ್ರಬಂಧ. ...
READ MORE