ಬುದ್ಧನ ಜೀವನ ಚರಿತ್ರೆ ಹಾಗೂ ಆತನ ಬೋಧೆಯ ಸಾಹಸಮಯ ಪ್ರಸಾರ ಕುರಿತು ಪ್ರಸ್ತುತಪಡಿಸುವ ಈ ಕೃತಿಯು ಸಾಕಷ್ಟು ಮಾಹಿತಿ ಒಳಗೊಂಡಿದ್ದರ ಹಿನ್ನೆಲೆಯಲ್ಲಿ ಉತ್ತಮ ಕೃತಿಯಾಗಿ ಮೂಡಿ ಬಂದಿದೆ. ಡಾ. ಬುದ್ದಣ್ಣ ಹಿಂಗಮಿರೆ ಅವರು ಈ ಕೃತಿಯ ಕರ್ತೃ. ಸಿದ್ಧಾರ್ಥ ಬುದ್ಧನಾಗುವ ಪರಿ, ಬೋಧೆಯ ವಿಶಿಷ್ಟ್ಯತೆ ಈ ಎಲ್ಲವನ್ನು ವಿಶ್ಲೇಷಿಸಿ ದಾಖಲಿಸಿದ ಅಂಶಗಳು ಒಳಗೊಂಡಿವೆ.
ಕವಿ ಬುದ್ದಣ್ಣ ಹಿಂಗಮಿರೆ ಅವರು 1933 ಸೆಪ್ಟೆಂಬರ್ 4ರಂದು ಕೊಲ್ಹಾಪುರ ಜಿಲ್ಲೆಯ ರಾಜಾಪುರದಲ್ಲಿ ಜನಿಸಿದರು. ತಂದೆ ಬಾಬು, ತಾಯಿ ದುಂಡವ್ವ. ಬೆಳಗಾವಿಯ ಲಿಂಗರಾಜ ಕಾಲೇಜಿನಿಂದ ಬಿ.ಎ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ರಷ್ಯನ್ ಭಾಷೆಯಲ್ಲಿ ಎಂ.ಎ ಪದವಿ, ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ ಹಾಗೂ ಪಿಎಚ್.ಡಿ. (ವಿಷಯ: ಕನ್ನಡದಲ್ಲಿ ಶೋಕ ಕಾವ್ಯ) ಪಡೆದರು. ಅಥಣಿಯಲ್ಲಿ ಹೈಸ್ಕೂಲ್ ಶಿಕ್ಷಕರಾಗಿ, ನಿಪ್ಪಾಣಿಯ ಜಿ.ಐ. ಬಾಗೇವಾಡಿ ಕಾಲೇಜಿನಲ್ಲಿ ಹಾಗೂ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಮತ್ತು ಧಾರವಾಡದ ಕರ್ನಾಟಕ ಕಲಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ. ಕೃತಿಗಳು: ಹುಲ್ಲುಗೆಜ್ಜೆ, ಶಬ್ದ ರಕ್ತ ಮತ್ತು ...
READ MORE