ಲೇಖಕ ಶಿವಾನಂದ ಜೋಶಿ ಅವರ ಕೃತಿ ’‘ಪ್ರಪಂಚ’ದ ಪಾಪು; ‘ಕಸ್ತೂರಿ’ಯ ಪಾವೆಂ’.ಅಪರೂಪದ ವಿದ್ವಾನ್ ಜೋಡಿ, ಸಾಹಿತ್ಯ ಓದು-ಬರಹ, ಪತ್ರಕರ್ತರಾಗಿ , ವಿದ್ವಾಂಸರು-ಪತ್ರಕರ್ತರು ಕಂಡಂತೆ, ಸೌಭಾಗ್ಯವತಿಯರು, ಮಾನ ಸನ್ಮಾನಗಳು, ಹುಬ್ಬಳ್ಳಿಯ ಹೆಮ್ಮೆ, ಅನುಬಂಧ ಸೇರಿದಂತೆ ಹತ್ತು ಅಧ್ಯಾಯಗಳಿವೆ. ಪಾಟೀಲ ಪುಟ್ಟಪ್ಪ ಹಾಗೂ ಪಾ.ವೆಂ ಅವರ ಸಾಮ್ಯತೆ ಜೀವನಶೈಲಿಯ ಕುರಿತು ತಮ್ಮ ಅನಿಸಿಕೆಗಳನ್ನು ಈ ಕೃತಿಯಲ್ಲಿ ಪ್ರಸ್ತುತಪಡಿಸಿದ್ದಾರೆ.
ಶಿವಾನಂದ ಜೋಶಿ ಮೂಲತಃ ಬಾಗಲಕೋಟೆ ಜಿಲ್ಲೆಯ ಕೆರೂರು ಗ್ರಾಮದವರು. (ಜನನ: 29-10-1937) ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಅವರು ಕ್ರೀಡಾಂಕಣಕ್ಕೆ ಬರೆಯುತ್ತಿದ್ದ ‘ಚಾರ್ ರನ್ ಕೆ. ಲಿಯೆ’ ಎಂಬ ಆಂಕಣ ಪ್ರಸಿದ್ಧಿ ಪಡೆದಿತ್ತು. ಇವರ ಕಾರ್ಯಕ್ಷೇತ್ರ ಮಾತ್ರ ಹುಬ್ಬಳ್ಳಿಯೇ ಆಗಿತ್ತು. ಪಾಪು-ಪಾವೆಂ: ಒಂದು ತೌಲನಿಕ ಅಧ್ಯಯನ, ಪತ್ರಿಕೋದ್ಯಮ ಒಂದು ಮಾರ್ಗದರ್ಶಿ, ಓಲಂಪಿಕ್ ಆಂದೋಲನ, ಕ್ರಿಕೆಟ್ ಕಥೆ, ವಿಜಯ ದುಂದುಭಿ, ಶಿರಡಿ ಸಾಯಿ ಸಚ್ಚರಿತ್ರೆ, ಸ್ತ್ರೀ ಚರಿತ್ರೆ, ಪುರುಷ ಭಾಗ್ಯ, ಇತಿಹಾಸದ ಹಾದಿಯಲ್ಲಿ ಸಾಧಕರ ಸಾಲು ಮುಂತಾದವು ಅವರ ಕೃತಿಗಳು. ಪಾಟೀಲ ಪುಟ್ಟಪ್ಪನವರ ಒಡೆತನದಲ್ಲಿದ್ದ ವಿಶ್ವವಾಣಿ ಹಾಗೂ ಪ್ರಪಂಚ ಪತ್ರಿಕೆಗಳ ಮೂಲಕ ಪತ್ರಿಕಾ ...
READ MORE