`ಭಗತ್ ಸಿಂಗ್' ಎಂಬುದು ಜೀವನಚರಿತ್ರೆಯ ಪುಸ್ತಕವಿದು. ಲೇಖಕ ಈಶ್ವರಚಂದ್ರ ರಚಿಸಿದ್ದಾರೆ. ವಿಶ್ವದ ಕ್ರಾಂತಿ ಇತಿಹಾಸದಲ್ಲಿ ಅವಿಸ್ಮರಣೀಯ ದಾಖಲೆ ನಿರ್ಮಿಸಿದ ಭಾರತದ ಕ್ರಾಂತಿರತ್ನ; ಅತಿ ಸಣ್ಣ ವಯಸ್ಸಿನಲ್ಲೆ ಬ್ರಿಟಿಷ್ ಅಧಿಕಾರಿಗಳನ್ನು ಗಡಗಡ ನಡುಗಿಸಿದ ಶೂರ; ಅಪ್ರತಿಮ ಸಂಘಟಕ; ಅಸಮಾನ ಸಾಹಸಿ ಎಂದು ಭಗತ್ ಸಿಂಗ್ ಅವರ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಭಗತ್ ಸಿಂಗ್ ಅವರ ಬಾಲ್ಯ ಜೀವನ, ಗೆಳೆಯರೊಂದಿಗೆ ತೆಗೆದುಕೊಂಡ ನಿರ್ಧಾರ, ಬ್ರಿಟಿಷರಿಗೆ ಸಿಂಹಸ್ವಪ್ನವಾದ ಪರಿ, ಗಲ್ಲಿಗೇರಿದ ದಿನಗಳು ಹೀಗೆ ಭಗತ್ ಸಿಂಗ್ ಅವರ ಜೀವನದ ಪ್ರಮುಖ ಹಂತಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಕನ್ನಡದ ಪ್ರಸಿದ್ಧ ಕಥೆಗಾರ ಈಶ್ವರಚಂದ್ರರು ಜುಲೈ 14, 1946ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೋದಿಗೆರಿಯಲ್ಲಿ ಜನಿಸಿದರು. ತಂದೆ ಎಚ್.ಎನ್. ರಾಮರಾವ್ ಅವರು ಮತ್ತು ತಾಯಿ ಪದ್ಮಾವತಮ್ಮನವರು. ಈಶ್ವರ ಚಂದ್ರರ ಪ್ರಾರಂಭಿಕ ಶಿಕ್ಷಣ ಚನ್ನಗಿರಿ, ಸಾಗರ, ಶಿವಮೊಗ್ಗಗಳಲ್ಲಿ ನಡೆದವು. ಮುಂದೆ ಭದ್ರಾವತಿಯಲ್ಲಿ ಡಿಪ್ಲೊಮಾ ಪೂರೈಸಿದ ಅವರು ಬೆಂಗಳೂರು ವಿಮಾನ ಕಾರ್ಖಾನೆಯ ‘ವಿಮಾನ ಸಂಶೋಧನೆ ಮತ್ತು ವಿನ್ಯಾಸ’ ಕೇಂದ್ರವನ್ನು ಸೇರಿ ನಲವತ್ತು ವರ್ಷಗಳ ಸುದೀರ್ಘಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದ ಕಡೆ ಒಲವು ತಳೆದ ಈಶ್ವರಚಂದ್ರರು ತಂದೆ ಹೇಳುತ್ತಿದ್ದ ಭಾರತ, ಭಾಗವತ, ರಾಮಾಯಣ ಕಾವ್ಯ, ಕಥೆಗಳಿಂದ ಪ್ರೇರಣೆ ಪಡೆದರು. ...
READ MORE