ಚಿಂತಲಪಲ್ಲಿ ವೆಂಕಟರಾವ್ ಅವರ ಜೀವನಚರಿತ್ರೆ ಪುಸ್ತಕವನ್ನು ಲೇಖಕಿ ನಾಗಮಣಿ ಎಸ್. ರಾವ್ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಕನ್ನಡನಾಡಿನ ಹಿರಿಯ ಸಂಗೀತ ವಿದ್ವಾಂಸರು, ತಮ್ಮ ಜೇನಿನಂತಹ ಸಂಗೀತದಿಂದ ಮಹಾರಾಜರಿಂದ ಕಡು ಬಡವರವರೆಗೆ ಸಾವಿರಾರು ಮಂದಿಯನ್ನು ತಣಿಸಿದರು, ದೇವರನಾಮಗಳನ್ನೇ ಹಾಡಿ ಗಂಟೆಗಟ್ಟಲೆ ಕಛೇರಿ ನಡೆಸುವ ಸಮರ್ಥರು, ಸೌಜನ್ಯದ ಮೂರ್ತಿ ಎಂದು ಚಿಂತಲಪಲ್ಲಿ ವೆಂಕಟರಾವ್ ಅವರ ಕುರಿತು ಇಲ್ಲಿ ವಿವರಿಸಲಾಗಿದೆ. ಚಿಂತಲಪಲ್ಲಿ ವೆಂಕಟರಾವ್ ಅವರ ಬಾಲ್ಯ ಜೀವನ, ಸಂಗೀತ ಕ್ಷೇತ್ರದೆಡೆಗೆ ತಳೆದ ಆಸಕ್ತಿ, ಅಭಿಮಾನಿಗಳೊಂದಿಗಿದ್ದ ಅವಿನಾಭಾವ ಸಂಬಂಧ, ದೇವರನಾಮ ಹಾಡುವ ಹಿಂದಿನ ಇತಿಹಾಸ ಇವೆಲ್ಲದರ ಕುರಿತಾಗಿ ಈ ಪುಸ್ತಕದಲ್ಲಿ ನೀಡಲಾಗಿದೆ.
ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ನಾಗಮಣಿ ಎಸ್. ರಾವ್ ಅವರು ಮಹಿಳಾ ಮತ್ತು ಮಕ್ಕಳ ಸಾಹಿತ್ಯ ರಚನೆಯಲ್ಲಿ ಸಕ್ರಿಯರು. ರಾಜ್ಯ ವಿಧಾನಮಂಡಲದ ಕಾರ್ಯ ಕಲಾಪಗಳನ್ನು ವರದಿ ಮಾಡಿದ ಪ್ರಥಮ ಮಹಿಳಾ ಪತ್ರಕರ್ತೆ. 'ಆಕಾಶವಾಣಿ ಪ್ರದೇಶ ಸಮಾಚಾರ'ದ ವಾರ್ತಾವಾಚಕಿ ವಿಧಾನಸಭಾ ಚುನಾವಣೆಯ ಆ್ಯಂಕರ್ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು 1936 ಮೇ 11 ರಂದು ಜನಿಸಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರು ಆಗಿದ್ದ ಅವರು “ಸ್ತ್ರೀಪಥ, ಧೀಮತಿಯರು ಅವರ ಮಹಿಳಾ ಸಾಹಿತ್ಯ, ಏಕಲವ್ಯ ಮಕ್ಕಳ ಸಾಹಿತ್ಯ ರಚನೆಯಾಗಿದೆ. ಸಂವರ್ಧಿನೀ, ಲೇಖ-ಲೋಕ-2, , ಧೀಮಂತ ಪತ್ರಕರ್ತ 'ತಾಯಿನಾಡು' ಪಿ.ಆರ್. ರಾಮಯ್ಯ, ರಂಗಲೇಖಕಿ, ಬಸ್ಸಿನೊಳಗೊಂದು ...
READ MORE