ಹಿರಿಯ ಲೇಖಕಿ ಡಾ. ಶಕುಂತಲಾ ಸಿದ್ಧರಾಮ ದುರಗಿ ಅವರು 12ನೇ ಶತಮಾನದ ಶಿವ ಶರಣ ಗೊಲ್ಲಾಳ ಜೀವನ ಸಂದೇಶವನ್ನುನೀಡಿದ ಕೃತಿ-ಶರಣ ಗೊಲ್ಲಾಳ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೊರುಚ ಅವರು, 'ಶರಣ ಗೊಲ್ಲಾಳನ ಬಗೆಗೆ ಸಾಕಷ್ಟು ಮಾಹಿತಿ ನೀಡುವ ಇಷ್ಟು ವಿಸ್ತ್ರತ ಕೃತಿ ಇದುವರೆಗೆ ಬಂದಂತಿಲ್ಲ' ಎಂದು ಹೇಳಿದ್ದಾರೆ.
ವೀರಶೈವ ಪುರಾಣ ಕಾವ್ಯಗಳಲ್ಲಿ ಗೊಲ್ಲಾಳ, ಗಾಜಿನ ಬೊಂಮಿ ತಂದಿಯ ಪುರಾಣ ಹಸ್ತಪ್ರತಿ, ದೀಪದ ಕಲಿಯರ ಕಾವ್ಯ - ತಾಡೋಲೆ ಪ್ರತಿ, ಶ್ರೀ ಗೊಲ್ಲಾಳಲಿಂಗೇಶ್ವರ ಪುರಾಣ - ವಿಶ್ಲೇಷಣೆ, ಮರಿಯಪ್ಪ ಸಾವುಕಾರನ ಪವಾಡ ಕಥನಕಾವ್ಯ, ಇಂತಹ ಎಲ್ಲಾ ಹಿನ್ನೆಲೆ ಇಟ್ಟುಕೊಂಡು ಮೊದಲ ಭಾಗದಲ್ಲಿ ಶರಣ ಗೊಲ್ಲಾಳನ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಜಾನಪದ ಗೀತೆಗಳಲ್ಲಿ ಗೊಲ್ಲಾಳ ಪ್ರಸ್ತಾಪ ಇರುವುದನ್ನು ಪರಿಗಣಿಸಿ ವಿಷಯ ವಿಸ್ತಾರಗೊಳಿಸಿದ್ದಾರೆ. 12ನೇ ಶತಮಾನದ ವಚನಕಾರನಾಗಿ ಗೊಲ್ಲಾಳನನ್ನು ಅಧ್ಯಯನ ಮಾಡಿದ್ದಾರೆ. ಅನುಬಂಧದಲ್ಲಿ ಜನಪದೀಯ ಲಾವಣಿ ಹಾಡು, ಕಂಬೀ ಹಾಡು ಮುಂತಾದವುಗಳನ್ನು ಸಂಗ್ರಹಿಸಿ, ಕೃತಿಯ ಮೌಲ್ಯ ಹೆಚ್ಚಿಸಿದ್ದಾರೆ.
ಲೇಖಕಿ ಡಾ. ಶಕುಂತಲಾ ಸಿದ್ಧರಾಮ. ದುರಗಿ ಅವರು ಮೂಲತಃ ಬಾಗಲಕೋಟೆಯವರು. ತಂದೆ ಶಿವಲಿಂಗಪ್ಪ ನಾವಲಗಿ, ತಾಯಿ ಪಾರ್ವತಮ್ಮ.ನಾವಲಗಿ. ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ಬಾಗಲಕೊಟೆಯಲ್ಲಿ ಶಿಕ್ಷಣ ಪಡೆದು ನಂತರ, ಧಾರವಾಡದಿಂದ ಕರ್ನಾಟಕ ವಿವಿ ಯಿಂದ ಎಂ.ಎ, ನಂತರ ಗುಲಬರ್ಗಾ ವಿವಿಗೆ ‘ಆಧುನಿಕ ಕನ್ನಡ ಮಹಿಳಾ ಸಾಹಿತ್ಯ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಲಭಿಸಿದೆ. ಕಲಬುರಗಿಯಲ್ಲಿಯ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆಯಾಗಿ, ಬೀದರನ ಬಿ.ವಿ. ಭೂಮರೆಡ್ಡಿ ಕಾಲೇಜು ಪ್ರಾಂಶುಪಾಲರಾಗಿ, ಈಗ (2001) ನಿವೃತ್ತರು, .ಗುಲಬರ್ಗಾ ವಿವಿ ಪಠ್ಯಪುಸ್ತಕ ಸಮಿತಿ ಸದಸ್ಯೆಯಾಗಿದ್ದರು. ಕೃತಿಗಳು-ಪ್ರಶಸ್ತಿಗಳು: ಮಗ್ಗಲು ಮನೆ ಅತಿಥಿ ...
READ MORE