`ರಾಸಬಿಹಾರಿ ಬೋಸ್' ಅವರ ಜೀವನಚರಿತ್ರೆಯಪುಸ್ತಕವಿದು. ಲೇಖಕ ತಿ.ತಾ. ಶರ್ಮ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ, ಕಲ್ಪನೆಗೂ ಮೀರಿದ ಸಾಹಸ ಜೀವನ ನಡೆಸಿದ ಭಾರತದ ಕ್ರಾಂತಿವೀರ. ದೆಹಲಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಶಕ್ತಿಯ ಪ್ರತಿನಿಧಿ ವೈಸರಾಯ್ ಮೇಲೆ ಬಾಂಬ್ ಎಸೆಯುವ ಸಂಚಿನ ನಾಯಕ. ಭಾರತದಿಂದ ತಪ್ಪಿಸಿಕೊಂಡು ಜಪಾನಿಗೆ ಹೋಗಿ ಸ್ವಾತಂತ್ರ್ಯದ ಹೋರಾಟ ಮುಂದುವರಿಸಿದ ಸೋಲರಿಯದ ಸಾಹಸಿ. ’ಪೂರ್ವ ಏಷ್ಯಾದಲ್ಲಿ ಭಾರತ ಸ್ವಾತಂತ್ರ್ಯದ ಹೋರಾಟದ ಪಿತಾಮಹ’ ಎಂದು ನೇತಾಜಿ ಸುಭಾಷರು ವರ್ಣಿಸಿದ ಧೀರ ಎಂದು ರಾಸಬಿಹಾರಿ ಬೋಸ್ ಅವರ ಕುರಿತಾಗಿ ಈ ಕೃತಿಯಲ್ಲಿ ಲೇಖಕರು ಸರಳ ಕನ್ನಡದಲ್ಲಿ ವಿವರಿಸಿದ್ದಾರೆ.
ಸಾಹಿತಿ, ಪತ್ರಕರ್ತ ತಿ.ತಾ. ಶರ್ಮ ಎಂತಲೇ ಪರಿಚಿತರಾಗಿರುವ ತಿರುಮಲೆ ತಾತಾಚಾರ್ಯ ಶರ್ಮ ಅವರು ಕನ್ನಡ ಸಾಹಿತ್ಯ ಹಾಗೂ ಪತ್ರಿಕಾರಂಗದಲ್ಲಿ ತನ್ನದೇ ಛಾಪು ಮೂಡಿಸಿದವರು. ಇವರು 1897 ಏಪ್ರಿಲ್ 27ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನಿಸಿದರು. ತಾಯಿ ಜಾನಕಿಯಮ್ಮ, ತಂದೆ ಶ್ರೀನಿವಾಸ ತಾತಾಚಾರ್ಯ. ಹುಟ್ಟೂರು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಪಡೆದರು. ಸ್ವಾತಂತ್ಯ್ರ ಚಳವಳಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಪತ್ರಕರ್ತರಾಗಿ ಉದ್ಯೋಗ ಆರಂಭಿಸಿದರು. ಭಾರತಿ ಕಾವ್ಯನಾಮದ ಮೂಲಕ ಹೆಸರಾಗಿದ್ದ ತಿರುಮಲೆ ರಾಜಮ್ಮ ಅವರು ಇವರ ಬಾಳಸಂಗಾತಿ. ಶಾಸನಗಳಲ್ಲಿ ಕಂಡುಬರುವ ಕನ್ನಡ ಕವಿಗಳು ಶರ್ಮ ಅವರ ಮೊದಲ ಕೃತಿಯಾಗಿದೆ. ಸಾಹಿತ್ಯ ಕೃಷಿಯಲ್ಲಿಯೂ ...
READ MORE