ಲೇಖಕ ಪ್ರಕಾಶರಾಜ್ ಮೇಹು ಅವರ ಕೃತಿ-ಅಂತರಂಗದ ಅಣ್ಣ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಅವರು ‘ನಟ ರಾಜಕುಮಾರ ಅವರ ಬಗ್ಗೆ ಬಂದಿರುವ ಪುಸ್ತಕಗಳಿಗೆ ಹೋಲಿಸಿದರೆ ಈ ಪುಸ್ತಕ ತುಂಬಾ ಚಿಕ್ಕದು. ಆದರೂ, ಅದು ಪರಿಶೀಲನೆಗೆ ಒಡ್ಡಿರುವ ವಿಷಯಗಳ ವ್ಯಾಪ್ತಿ ದೊಡ್ಡದು. ರಾಜ್ ಅವರ ವ್ಯಕ್ತಿತ್ವವನ್ನು ಉತ್ಪ್ರೇಕ್ಷೆಯ ಮಾತುಗಳಿಲ್ಲದೇ ಈ ಕೃತಿ ಕಟ್ಟಿಕೊಡುತ್ತದೆ. ಬರವಣಿಗೆಯಲ್ಲಿ ಸಮಚಿತ್ತದ ನಿರೂಪಣೆ ಇದೆ. ಸತ್ಯಾಂಶವನ್ನು ಮುಂದಿಟ್ಟುಕೊಂಡು ನಿರುದ್ವಿಗ್ನವಾಗಿ ತರ್ಕಿಸುವ ಗುಣ ಈ ಕೃತಿಯಲ್ಲಿದೆ’ ಎಂದು ಪ್ರಶಂಸಿಸಿದ್ದರೆ, ಡಾ. ಕೆ. ಪುಟ್ಟಸ್ವಾಮಿ ಅವರು ‘ಕೆಲವು ಅಪರೂಪದ ಮಾಹಿತಿ ಒದಗಿಸಿ, ರಾಜ್-ಲೀಲಾ ವಿನೋದವಲ್ಲ’ ಎಂಬ ಆಧ್ಯಾಯ ಸೇರಿಸಿ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಪ್ರಕಾಶರಾಜ್ ಮೇಹು ಮೂಲತಃ ಮೇಗಲ ಹುಂಡಿಯ ಚಾಮರಾಜನಗರ ತಾಲೂಕಿನವರು. ತಂದೆ ಪುಟ್ಟಸ್ವಾಮಿ ಗೌಡ. ತಾಯಿ ಸಾವಿತ್ರಮ್ಮ. ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ನೀನಾಸಂ ಪದವಿ ಪೂರೈಸಿದ್ದಾರೆ. ಟಿ ಎಸ್ ನಾಗಾಭರಣ, ಗಿರೀಶ್ ಕಾಸರವಳ್ಳಿ, ಸಿಂಗೀತಂ ಶ್ರೀನಿವಾಸರಾವ್, ಯೋಗರಾಜ್ ಭಟ್, ಮುಂತಾದವರ ಜೊತೆ ಸಹ- ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜಕುಮಾರ್ ಅವರ ವಜ್ರೇಶ್ವರಿ ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ಸಹ-ನಿರ್ದೇಶಕನಾಗಿ ಕೆಲಸಮಾಡಿದ್ದಾರೆ. "ಡಿ ಎನ್ ಎ" ಸ್ವತಂತ್ರ ನಿರ್ದೇಶನದ ಮೊದಲ ಸಿನಿಮಾ. 2001 ರಲ್ಲಿ ಬರೆದ "ತಿಮ್ಮಜ್ಜಿಯ ಮ್ಯಾಗ್ಲುಂಡಿ" ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ...
READ MORE