ಪಿ. ಕೋದಂಡರಾವ್ ಜೀವನಚರಿತ್ರೆ ಯನ್ನು ಲೇಖಕ ಮಾ.ನಾ. ಚೌಡಪ್ಪ ರಚಿಸಿದ್ದಾರೆ. ವಿದ್ಯಾರ್ಥಿ ದೆಸೆ ಮುಗಿಯುವಾಗಲೇ ದೇಶಸೇವೆಗೆ ಬಾಳನ್ನು ಮುಡುಪಾಗಿಡಲು ತೀರ್ಮಾನಿಸಿದರು ಕೋದಂಡರಾವ್. ಸರ್ವೆಂಟ್ಸ್ ಆಫ್ ಇಂಡಿಯ ಸೊಸೈಟಿಯ ಸದಸ್ಯರಾಗಿ ಸಮರ್ಪಿತ ಜೀವನ ನಡೆಸಿದರು. ಜಾತಿ ವ್ಯತ್ಯಾಸಗಳನ್ನು ಲೆಕ್ಕಿಸದೆ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಭಾರತೀಯರಿಗಾಗಿ ದುಡಿದರು. ನಿರ್ಭಯದ, ಸಮತೂಕದ ಅಭಿಪ್ರಾಯಗಳಿಗೆ ಅವರು ಹೆಸರಾದವರ ಎಂದು ಪಿ. ಕೋದಂಡರಾವ್ ಅವರ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
ಪತ್ರಕರ್ತ, ಕನ್ನಡಪರ ಹೋರಾಟಗಾರ, ಬರಹಗಾರರಾಗಿದ್ದ ಮಾ.ನಾ. ಚೌಡಪ್ಪನವರು 1909 ಜುಲೈ 29ರಂದು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಜನಿಸಿದರು. ತಾಯಿ ಲಕ್ಷ್ಮೀದೇವಮ್ಮ. ತಂದೆ ನಾರಸೀದೇವಯ್ಯ.. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ, ಮೊದಲು ಮೈಸೂರು ಮತ್ತು ಮದರಾಸು ಆಕಾಶವಾಣಿಗಳಲ್ಲಿ ಉದ್ಘೋಷಕ ಮತ್ತು ವಾರ್ತಾವಿಭಾಗದಲ್ಲಿ ನಂತರ ಉದ್ಯೋಗ,. ಪತ್ರಕರ್ತರಾದರು. ಪತ್ರಿಕೋದ್ಯಮಿ ಬಿ.ಎನ್.ಗುಪ್ತ ಅವರ ಜೊತೆಗೂಡಿ 'ಪ್ರಜಾಮತ' ವಾರಪತ್ರಿಕೆ ಸ್ಥಾಪಿಸಿದರು. ಮೈಸೂರು ಸಂಸ್ಥಾನವು ಈ ಪತ್ರಿಕೆ ನಿಷೇಧಿಸಿದಾಗ ಮುಂಬೈ ಕರ್ನಾಟಕದ ಹುಬ್ಬಳ್ಳಿಗೆ ಹೋಗಿ ಪತ್ರಿಕೆ ಆರಂಭಿಸಿದ ಸಾಹಸಿ. ಬೆಂಗಳೂರು ಆಕಾಶವಾಣಿಯಲ್ಲಿ ಸಹನಿರ್ಮಾಪಕರಾಗಿದ್ದರು. ನಿವೃತ್ತರಾದ ಮೇಲೆ ‘ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ಸಂದೇಶ ಎಂಬ ಪತ್ರಿಕೆ ನಿರ್ವಹಿಸಿದರು. ಪತ್ರಿಕಾ ...
READ MORE