ಶತಮಾನ ಕಂಡ ಸಾಹಿತಿ ಶ್ರೀರಂಗ

Author : ಬಸವರಾಜ ಪಿ. ಡೋಣೂರ

Pages 102

₹ 50.00




Year of Publication: 2010
Published by: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
Address: ಧಾರವಾಡ- 580001

Synopsys

‘ಶತಮಾನ ಕಂಡ ಸಾಹಿತಿ ಶ್ರೀರಂಗ’ ಕನ್ನಡದ ಪ್ರಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ ಆದ್ಯ ರಂಗಾಚಾರ್ಯರ ಬದುಕು ಬರಹದ ಕುರಿತ ಕೃತಿ. ಲೇಖಕ ಬಸವರಾಜ ಡೋಣೂರರು ಶ್ರೀರಂಗರ ಜಿಲ್ಲೆಯವರೇ ಆಗಿದ್ದು, ಶ್ರೀರಂಗರ ಬದುಕು ಬರಹದ ಕುರಿತಾದ ವಿಷಯ ಪ್ರಸ್ತಾಪಗಳನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಒಂದನೇ ಭಾಗದಲ್ಲಿ ಆದ್ಯ ರಂಗಾಚಾರ್ಯ ’ ಶ್ರೀರಂ” ರಾದದ್ದು, ಶ್ರೀರಂಗರು ಹಾಗೂ ಸಮಾಜ, ರಂಗರು ಮತ್ತು ಪ್ರತಿರೋಧ, ಶ್ರೀರಂಗದ ವಿಕ್ಷಿಪ್ತತೆ ಮತ್ತು ಶ್ರೀರಂಗರು ಮತ್ತು ವಿವಾದಗಳು ಎಂಬ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.

ಎರಡನೇ ಭಾಗದಲ್ಲಿ ಶ್ರೀರಂಗರ ನಾಟಕಗಳು, ಶ್ರೀರಂಗರ ಕಾದಂಬರಿಗಳು, ಶ್ರೀರಂಗರ ರಂಗಮೀಮಾಂಸೆ, ಶ್ರೀರಂಗರ ನಾಟ್ಯ ವಿಮರ್ಶೆ ಗಳಿವೆ. ಆನಂತರದಲ್ಲಿ ಅನುಬಂಧ-1 (ಶ್ರೀರಂಗರ ಕೃತಿಗಳು) ಅನುಬಂಧ-2 ರಲ್ಲಿ ಆದ್ಯ ರಂಗಾಚಾರ್ಯರ ಕೆಲವು ಮಹತ್ವದ ಘಟನೆಗಳನ್ನು ದಾಖಲಿಸಲಾಗಿದೆ.

About the Author

ಬಸವರಾಜ ಪಿ. ಡೋಣೂರ
(26 July 1969)

ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.  1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...

READ MORE

Related Books