ಪಂಡಿತ ಚನ್ನಪ್ಪ ಎರೇಸೀಮೆ ಅವರು ಬರೆದ ಕೃತಿ-ಸಿದ್ಧರಾಮನ ಲಿಂಗ ತಪಸ್ಸು. ಶೂನ್ಯ ಸಂಪಾದನೆ, ಪ್ರಭುಲಿಂಗ ಲೀಲೆ ಮುಂತಾದ ಕೃತಿಗಳ ಅಧ್ಯಯನದ ಪರಿಣಾಮ ಮೂಡಿದ ಕೃತಿ ಇದು ಎಂದು ಲೇಖಕರು ಸ್ಪಷ್ಟಪಡಿಸಿದ್ದಾರೆ. ಕಲ್ಯಾಣದ ಶಿವಶರಣರ ಪೈಕಿ ಸೊನ್ನಲಿಗೆಯ ಸಿದ್ಧರಾಮನ ಚರಿತ್ರೆ ಅತ್ಯಂತ ಕುತೂಹಲಕಾರಿ ಮತ್ತು ಸದಾ ಸ್ಮರಣೀಯ. ಸಿದ್ಧರಾಮನ ಬಗ್ಗೆ ಮೊದಲ ಬರೆದ ಕವಿಯೇ ರಾಘವಾಂಕ. ಸ್ವತಃ ಸಿದ್ಧರಾಮರೇ ಬಸವಸ್ತ್ರೋತ್ರದ ತ್ರಿವಿಧಿ, ಅಷ್ಟಾವರಣ, ಸ್ತ್ರೀತ್ರದ ತ್ರಿವಿಧಿ, ಮಂತ್ರಗೋಪ್ಯ, ಕಾಲಜ್ಞಾನದಂತಹ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಸಿದ್ಧರಾಮರ ಲಿಂಗ ತಪಸ್ಸು ಸಮಾನ ಜೀವನ ಕುರಿತು ಲೇಖಕರು ಬರೆದಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...
READ MORE