ಸಿದ್ದರಾಮ

Author : ಸಿದ್ಧಯ್ಯ ಪುರಾಣಿಕ

Pages 96

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಸಿದ್ದರಾಮ' ಜೀವನಚರಿತ್ರೆಯ ಈ ಪುಸ್ತಕವನ್ನು ಲೇಖಕ ಸಿದ್ದಯ್ಯ ಪುರಾಣಿಕ್‌ ಅವರು ರಚಿಸಿದ್ದಾರೆ. ತನ್ನ ನಿಷ್ಠೆಯಿಂದ ಶ್ರೀ ಶೈಲದ ಮಲ್ಲಯ್ಯನನ್ನು ಒಲಿಸಿಕೊಂಡ ಬಾಲಭಕ್ತ. ಇವನಿಂದ ಸೊನ್ನಲೆಪುರವೇ ಅಭಿನವ ಶ್ರೀ ಶೈಲವಾಯಿತು. ಬಸವಣ್ಣನವರ ಬಳಗವನ್ನು ಸೇರಿ ಶೂನ್ಯ ಸಿಂಹಾಸನಕ್ಕೆ ಜಗದ್ಗುರುಗಳಾದರು ಸಿದ್ದರಾಮರು. ಅರಿಶ್ರೇಷ್ಠ ವಚನಕಾರರಲ್ಲಿ ಒಬ್ಬರು ಎಂದು ಸಿದ್ದರಾಮ ಅವರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ತನ್ನ ಬಾಲ್ಯದಲ್ಲೇ ದೇವರನ್ನು ಒಲಿಸಿಕೊಂಡ ಮಹಾತ್ಮ ಸಿದ್ಧರಾಮ. ಸಮಾಜದಲ್ಲಿ ಜಾತಿ ಮತಗಳನ್ನು ದೂರಮಾಡಿ ಬಸವಣ್ಣನವರ ಜೊತೆಗೆ ಅನೇಕ ವಚನಗಳನ್ನು ರಚಿಸಿ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯವಲ್ಲಿ ಇವರು ನೀಡಿದ ಕೊಡುಗೆಗಳು ಜೀವನದ ಹಂತಗಳು ಹೀಗೆ ಇವರ ಜೀವನದ ಹಲವಾರು ಮಹತ್ವದ ಘಟ್ಟಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ.

About the Author

ಸಿದ್ಧಯ್ಯ ಪುರಾಣಿಕ
(18 June 1918 - 05 September 1994)

ಕಾವ್ಯಾನಂದ ಕಾವ್ಯನಾಮಾಂಕಿತ ಸಿದ್ಧಯ್ಯ ಪುರಾಣಿಕ ಅವರು ಜನಿಸಿದ್ದು 1918 ಜೂನ್ 18ರಂದು. ಹುಟ್ಟೂರು ರಾಯಚೂರು ಜಿಲ್ಲೆಯ ಯಲಬುರಗಿ ತಾಲ್ಲೂಕಿನ ದ್ಯಾಂಪುರ. ಕಲಬುರ್ಗಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಮೆಟ್ರಿಕ್ ಹಾಗೂ ಪದವಿ ಶಿಕ್ಷಣ ಪಡೆದಿದ್ದರು.  ತಹಸೀಲ್ದಾರರಾಗಿ ವೃತ್ತಿ ಆರಂಭಿಸಿದ್ದ ಇವರು ಸರ್ಕಾರದ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿ ಲೇಬರ್ ಕಮೀಷನರಾಗಿ ಕೆಲಸ ಮಾಡಿ ನಿವೃತ್ತರಾದರು.  ಇವರಿಗೆ ಭಾರತೀಯ ಭಾಷಾ ಪರಿಷತ್ತಿನಿಂದ ಪ್ರಥಮ ಬಿಲ್ವಾರ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.  ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಕಲಬುರ್ಗಿಯಲ್ಲಿ ನಡೆದ ಐವತ್ತೆಂಟನೆಯ ಕನ್ನಡ ಸಾಹಿತ್ಯ ...

READ MORE

Related Books