‘ಡಾ. ಬಿ. ಆರ್. ಅಂಬೇಡ್ಕರ್ ಪುಸ್ತಕ ಪ್ರೀತಿ’ ಲೇಖಕ ಪ್ರೊ ಎಚ್.ಟಿ. ಪೋತೆ ಅವರ ಕೃತಿ. ಶೋಷಿತರು ಅನುಭವಿಸಿದ ಅವಮಾನ-ಹಸಿವುಗಳನ್ನು ಹೋಗಲಾಡಿಸಿ ಅವರೊಳಗೆ ಹುದುಗಿದ್ದ ಶಕ್ತಿ, ಸ್ವಾಭಿಮಾನವನ್ನು ಹೊರಹಾಕಲಿಕ್ಕಾಗಿಯೇ ಹಾತೊರೆದು, ಹಗಲು ರಾತ್ರಿ ದುಡಿದ ಜೀವ ಅಂಬೇಡ್ಕರ್,
ಅಂಬೇಡ್ಕರ್ ಎಂದರೆ ಸಂವಿಧಾನದ ರಚನೆಗೆ, ಅಲಕ್ಷಿತರ ಏಳೆಗೆ ಮಾತ್ರ ಶ್ರಮಿಸಿದವರಲ್ಲ. ಈ ನೆಲದ ಮನುಷ್ಯರಲ್ಲಿನ ಅಮಾನವೀಯತೆಯನ್ನು ಕಿತ್ತುಹಾಕಿ ಸಮಾನತೆಯನ್ನು ತರಬೇಕೆಂಬುವ ಹಂಬಲ ಹೊತ್ತವರು. ಮಾನವೀಯ ಪ್ರಜ್ಞೆಯನ್ನು ಬಿತ್ತಬೇಕೆಂದು ಹಪಹಪಿಸಿದವರು. ಹಾಗಾಗಿ, ಅಂಬೇಡ್ಕರ್ ಪ್ರಜ್ಞೆಯ ಚಹರೆಗಳನ್ನು ಕುಂದದಂತೆ ಕಾಪಾಡಿ ಕೊಳ್ಳುವುದು ವರ್ತಮಾನದ ತುರ್ತು,
ಪ್ರಸ್ತುತ ಕೃತಿಯಲ್ಲಿ ಅಂಬೇಡ್ಕರ್ : ಪುಸ್ತಕಪ್ರೀತಿ, ಅಂಬೇಡ್ಕರ್ ಅವರನ್ನು ಪ್ರಭಾವಿಸಿದವರು, ಅಂಬೇಡ್ಕರ್ ಅವರ ದಾರ್ಶನಿಕತೆ, ಬುದ್ದ-ಬಸವ ತೋರಿದ ತಳಾದಿ ಪ್ರೀತಿ, ಬಸವನ ನೆಲದಿಂದ, ಚಂದ್ರಪ್ರಸಾದ ತ್ಯಾಗಿ, ಜಗಜೀವನರಾಮ ನೆನಪು : ಒಂದಷ್ಟು ಮಾತುಗಳು, ನಂಬುಗೆ-ಮೂಢನಂಬುಗೆ, ದೇವರು-ಧರ್ಮ , ತುಳಿಯದಿರಿ ಮತ್ತೆ ಮತ್ತೆ, ರಾಮ-ಹನುಮರ ನೆನೆದ ಜನ, ದಲಿತ ಸಾಹಿತ್ಯ ವಿಮರ್ಶೆ, ಸಾಮಾಜಿಕ ಪ್ರಜ್ಞೆ ಹಾಗೂ ಸಾತ್ವಿಕ ಚಿಂತನೆಯ ಸಂತ ನಾರಾಯಣ ಗುರು ಎಂಬ 12 ಲೇಖನಗಳಿವೆ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE