ಡಾ.ವೀರಣ್ಣ ದಂಡೆ

Author : ಕಲ್ಯಾಣರಾವ ಜಿ. ಪಾಟೀಲ

Pages 132

₹ 65.00




Year of Publication: 2016
Published by: ರಚನಾ ಪಬ್ಲಿಷಿಂಗ್ ಸೊಸೈಟಿ
Address: ಶರಣಬಸವೇಶ್ವರ ದೇವಾಲಯ ಹತ್ತಿರ, , ಕುಂಬಾರ ಬೀದಿ, ಬ್ರಹ್ಮಪುರ, ಕಲಬುರಗಿ- 585103

Synopsys

ಕನ್ನಡ ನಾಡಿನ ಬಹುಶ್ರುತ ಜನಪದ ವಿದ್ವಾಂಸರಲ್ಲಿ ಡಾ. ವೀರಣ್ಣ ದಂಡೆಯವರು ಒಬ್ಬರು. ಅವರ ಮಾತು ಕೃತಿಗಳೆಲ್ಲವೂ ಜನಪದ ಶೈಲಿಯವು. ಅವರ ಅಪಾರ ಶಿಷ್ಯ ಬಳಗದಲ್ಲಿ ಡಾ. ಕಲ್ಯಾಣರಾವ ಜಿ. ಪಾಟೀಲ ಒಬ್ಬರು. ಡಾ. ವೀರಣ್ಣ ದಂಡೆ ಮತ್ತು ಡಾ. ಜಯಶ್ರೀ ದಂಡೆಯವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ದಾಖಲಿಸಿದ್ದಾರೆ. ಈ ಪುಸ್ತಕದ ಶೀರ್ಷಿಕೆ ‘ವೀರಣ್ಣ ದಂಡೆ’ ಎಂದಿದ್ದರೂ ದಂಡೆ ದಂಪತಿಗಳ ವ್ಯಕ್ತಿತ್ವ ಮತ್ತು ಅವರ ಕೃತಿಗಳ ಸಂಕ್ಷಿಪ್ತ ಪರಿಚಯವನ್ನು ಒಳಗೊಂಡಿದೆ. 

ಜಾನಪದ ಮತ್ತು ಶಿಷ್ಟ ಸಾಹಿತ್ಯ ಎರಡಲ್ಲೂ ಸಮನ್ವಯತೆ ಸಾಧಿಸಿರುವ ಡಾ. ವೀರಣ್ಣ ದಂಡೆ ಅವರು ಸ್ನೇಹಶೀಲ ವ್ಯಕ್ತಿತ್ವಕ್ಕೆ ಹೆಸರಾದವರು. ವಿದ್ಯಾರ್ಥಿ ಹಾಗೂ ಸಹೃದಯದವರ ಜೊತೆಗಿನ ಅವರ ಒಡನಾಟವು ಹಲವರಿಗೆ ಮಾರ್ಗದರ್ಶಿಯಾಗಿದೆ. ಅಧ್ಯಯನ-ಅಧ್ಯಾಪನ, ಸಂಶೋಧನೆ-ಸಂಪಾದನೆ ಯಲ್ಲಿನ ಶಿಸ್ತು, ಔಚಿತ್ಯಪೂರ್ಣ ವಿಶ್ಲೇಷಣೆಯಿಂದಾಗಿ ಅವರೊಬ್ಬ ಸಮರ್ಥ ಅಧ್ಯಾಪಕ, ಸಂಶೋಧಕ, ವಿಶ್ಲೇಷಕ ಮತ್ತು ಸಂಪಾದಕರೆಂದು ಖ್ಯಾತಿ ಗಳಿಸಿದ್ದಾರೆ. 

ಕನ್ನಡ ಜಾನಪದ ಪ್ರಜ್ಞೆ, ದೇಸಿ ದೃಷ್ಟಿ, ಕಲಬುರ್ಗಿ ಜಿಲ್ಲೆಯ ಜನಪದ ಕಥೆಗಳ ಆಶಯ ಮತ್ತು ಮಾದರಿಗಳು, ಜನಪದ ಕಾವ್ಯಮೀಮಾಂಸೆ, ವಚನ ಕಾವ್ಯಮೀಮಾಂಸೆ, ಕನ್ನಡ ಶಿಷ್ಟ ಕಾವ್ಯಮೀಮಾಂಸೆ, 12ನೇ ಶತಮಾನದ ಶರಣರ ಸ್ಮಾರಕಗಳು 1 ರಿಂದ 3 ಸಂಪುಟಗಳು, ಜನಪದ ಸಾಹಿತ್ಯ ಚರಿತ್ರೆ ಇತ್ಯಾದಿ ಕೃತಿಗಳು ಡಾ. ವೀರಣ್ಣ ದಂಡೆಯವರಿಗೆ ಹೆಸರು ತಂದು ಕೊಟ್ಟಿದ್ದನ್ನು ಲೇಖಕರು ಗುರುತಿಸಿದ್ದಾರೆ. ರಚನೆ ಮತ್ತು ಸಂಪಾದನೆಯಲ್ಲಿ ವ್ಯಕ್ತವಾದ ಶ್ರೀಯುತರ ವ್ಯಕ್ತಿತ್ವದ ಹಿರಿಮೆಯನ್ನು ಅನಾವರಣಗೊಳಿಸುತ್ತಲೇ ಅವರ ಕೃತಿಗಳ ಸಂಕ್ಷಿಪ್ತ ಪರಿಚಯವನ್ನು ಬಹಳ ಶ್ರದ್ಧೆಯಿಂದ ಮಾಡಿಕೊಟ್ಟಿದ್ದಾರೆ. ಈ ಅಂಶವು ಲೇಖಕರ ಸಮಚಿತ್ತದ ಬರವಣಿಗೆಗೆ ಸಾಕ್ಷಿಯಾಗುತ್ತದೆ.

ಈ ಕೃತಿಯ ಕೊನೆಯ ಭಾಗದಲ್ಲಿ ಡಾ. ವೀರಣ್ಣ ದಂಡೆಯವರ ಧರ್ಮಪತ್ನಿ ಶ್ರೀಮತಿ ಡಾ. ಜಯಶ್ರೀ ದಂಡೆಯವರ ಜೀವನ ಮತ್ತು ಸಾಹಿತ್ಯಾವಲೋಕನ ಗೈದಿದ್ದಾರೆ. ವಿದ್ಯಾರ್ಥಿ ದಿಶೆಯಿಂದಲೇ ಪ್ರತಿಭಾನ್ವಿತೆಯಾಗಿದ್ದ ಡಾ. ಜಯಶ್ರೀ ದಂಡೆಯವರು ಸರಳ ಜೀವನಶೈಲಿ, ಆತ್ಮೀಯ ಗುಣ, ಔಚಿತ್ಯ ಮೀರದ ಬರಹದಿಂದಾಗಿ ಯಶಸ್ವಿ ಅಧ್ಯಾಪಕರು, ಶರಣ ಸಾಹಿತಿಗಳು, ಬೆಡಗಿನ ವಚನಗಳ ಅನುಶೀಲಕರಾದ ಬಗೆಯನ್ನು ಲೇಖಕರು ಅತ್ಮೀಯವಾಗಿ ವಿವರಿಸಿದ್ದಾರೆ.

 ಅವರ ವ್ಯಕ್ತಿತ್ವ ಕುರಿತು ಲೇಖಕರ ಅಭಿಪ್ರಾಯಗಳನ್ನು ನೋಡುವುದಾದರೆ: “ಜೀವನದಲ್ಲಿ ಎಂತಹ ಕ್ಲಿಷ್ಟ ಸಂದರ್ಭಗಳು ಬಂದರೂ ಎಲ್ಲವನ್ನೂ ಸಮಚಿತ್ತ ದೃಷ್ಟಿಯಿಂದ ಸರಿದೂಗಿಸಿಕೊಂಡು ಹೋಗುವ ಅವರ ಸಹನೆ ಮತ್ತು ಸಮಾಧಾನದ ಸ್ವಭಾವ; ಉದ್ಯೋಗದಲ್ಲಿ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಸಮರ್ಪಣೆ; ಸ್ಥಳ, ಸಮಯ, ಸಂದರ್ಭ, ಸ್ಥಾನ, ವ್ಯಕ್ತಿ ವಿಷಯ ಯಾವುದರ ಬಗೆಗೂ ಹಗುರವಾಗಿ ಮಾತನಾಡುತ್ತ ಕಾಲಹರಣ ಮಾಡದಿರುವ ಜಾಗರೂಕತೆ; ವೈಯಕ್ತಿಕವಾಗಿ ಸಾತ್ವಿಕತೆ, ಸಾಮಾಜಿಕವಾಗಿ ಸರಳತೆ ಮತ್ತು ಧಾರ್ಮಿಕವಾಗಿ ಸೌಹಾರ್ದತೆಯನ್ನು ಮೈಗೂಡಿಸಿಕೊಂಡಿದ್ದಾರೆ”. ಈ ನುಡಿಚಿತ್ರದಲ್ಲಿ ಡಾ. ಜಯಶ್ರೀ ದಂಡೆಯವರ ಸಮದರ್ಶಿ ವ್ಯಕ್ತಿತ್ವ ಕಣ್ಣಿಗೆ ಕಟ್ಟಿದಂತೆ ಪಡಿಮೂಡಿರುವುದನ್ನು ಮನಗಾಣಬಹುದಾಗಿದೆ. 

ಡಾ. ಜಯಶ್ರೀ ದಂಡೆಯವರ ಇದುವರೆಗೆ 50ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ್ದು ಅವುಗಳಲ್ಲಿ ಬೆಡಗಿನ ವಚನಗಳ ಪರಿಭಾಷಾ ಕೋಶ, ಶರಣರ ಆರ್ಥಿಕ ಚಿಂತನೆ, ವಚನಗಳಲ್ಲಿ ಶೈವ-ವೀರಶೈವ ಸೇರಿದಂತೆ 15 ಅಮೂಲ್ಯ ಕೃತಿಗಳ ಸಂಕ್ಷಿಪ್ತ ಸಮೀಕ್ಷೆಯೂ ಇಲ್ಲಿರುವುದು ವಿಶೇಷವಾಗಿದೆ.  

ವೃತ್ತಿಯಿಂದ ನಿವೃತ್ತರಾಗಿದ್ದರೂ ಪ್ರವೃತ್ತಿಯಿಂದ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ದಂಪತಿಗಳ ಸೇವಾ ದುರಂಧರತೆಯನ್ನು ಲೇಖಕರು ಹೃದಯಸ್ಪಶಿಯಾಗಿ ದಾಖಲಿಸಿದ್ದಾರೆ. ತಮ್ಮ ಬರಹದ ಮೂಲಕ ಗುರುಕಾಣಿಕೆ ಸಲ್ಲಿಸಿದ್ದಾರೆ.

 

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books