ಪ್ರೊ.ವಸಂತ ಕುಷ್ಟಗಿ ಅವರು ರಚಿಸಿರುವ" ಶ್ರೀ ವ್ಯಾಸ ವಿಠಲರು" ಕೃತಿಯನ್ನು ಅವಲೋಕಿಸಿದಾಗ ಈ ಕೃತಿಯಲ್ಲಿ ವ್ಯಾಸವಿಠಲರ ಬದುಕು-ಬರಹ ಹಾಗೂ ಶ್ರೀ ವ್ಯಾಸವಿಠಲ 22 ಕೀರ್ತನೆ,4 ಸುಳಾದಿ,1 ಉಗಾಭೋಗ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ. ಕಲ್ಬುರ್ಗಿಯ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 108 ಪುಟಗಳಿಗೆ 90 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಸದ್ಯ ಕಲಬುರ್ಗಿ ನಿವಾಸಿಯಾಗಿರುವ ಕವಿ ವಸಂತ ಕುಷ್ಟಗಿ ಅವರು ಮೂಲತಃ ಹಿಂದಿನ ರಾಯಚೂರು ಜಿಲ್ಲೆ ಕುಷ್ಟಗಿಯವರು. ವಸಂತ ಕುಷ್ಟಗಿ ಅವರು ಜನಿಸಿದ್ದು 1936 ಅಕ್ಟೋಬರ್ 10ರಂದು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಪ್ರವೃತ್ತಿಯಿಂದ ಕವಿ-ಲೇಖಕ. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ನಂತರ ಅವರು ಬೀದರಿನ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ನಂತರ ಕಲಬುರ್ಗಿಯ ಎಂ.ಎಸ್.ಐ ಹಾಗೂ ಎನ್.ವಿ. ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ನಿವೃತ್ತಿ ನಂತರ ಸ್ವಾಮಿ ರಮಾನಂದ ತೀರ್ಥ ಸಂಶೋಧನಾ ಸಂಸ್ಥೆಯ ಗೌರವ ನಿರ್ದೇಶಕರಾಗಿದ್ದಾರೆ. ಅವರಿಗೆ ಕಡೆಂಗೋಡ್ಲು ...
READ MORE