ಕೆಂಪೇಗೌಡ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಕೆಳದಿ ಗುಂಡಾ ಜೋಯಿಸ್ ರಚಿಸಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರಿನ ನಿರ್ಮಾಪಕ. ಗುರುವಿನ ಆಶ್ರಮದಲ್ಲಿ ವಿದ್ಯಾರ್ಥಿಯಾಗಿದ್ದಾಗಲೆ ಧೈರ್ಯ, ಶೌರ್ಯಗಳನ್ನು ಮೆರೆದವನು. ಪ್ರಜೆಗಳ ಹಿತವನ್ನೆ ಮುಖ್ಯವಾಗಿ ಎಣಿಸಿ ರಾಜ್ಯಭಾರ ಮಾಡಿದ. ವಿಜಯನಗರದ ಚಕ್ರವರ್ತಿಯೂ ಅವನ ನಿಷ್ಠೆಯನ್ನು ಮೆಚ್ಚುವಂತೆ ನಡೆದುಕೊಂಡ ಧೀರ, ಧರ್ಮಪ್ರಭು ಎಂದು ಕೆಂಪೇಗೌಡ ಅವರ ಕುರಿತಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಕೆಳದಿ ಗುಂಡಾ ಜೋಯಿಸ್ ಎಂದೇ ಖ್ಯಾತಿಯ ಇತಿಹಾಸತಜ್ಞರು. ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರು. ಹಳೆಯ ಕಾಲದ ಮೋಡಿಲಿಪಿಯನ್ನು, ತಾಳೆಗರಿ ಗ್ರಂಥಗಳನ್ನು ಓದಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಒಬ್ಬರು. ಗುಂಡಾಜೋಯಿಸರು 1931 ರ ಸೆಪ್ಟೆಂಬರ್ 27ರಂದು ಕೆಳದಿಯಲ್ಲಿ ಜನಿಸಿದರು. ತಾಯಿ ಮೂಕಾಂಬಿಕಾ, ತಂದೆ ನಂಜುಂಡ ಜೋಯಿಸರು. ಇವರ ಮೂಲ ಹೆಸರು ಲಕ್ಷ್ಮೀನಾರಾಯಣ. ಎರಡು ಮಕ್ಕಳು ತೀರಿಕೊಂಡಿದ್ದರಿಂದ ಇವರಾದರೂ ಕಲ್ಲುಗುಂಡಿನಂತೆ ಬದುಕಲಿ ಎಂದು ಅವರ ಅಜ್ಜಿ ಅವರಿಗೆ ’ಗುಂಡ’ ಎಂದು ಕರೆದಿದ್ದರಂತೆ. ಜೋಯಿಸರ ಪ್ರಾಥಮಿಕ ಶಿಕ್ಷಣ ಹುರಳಿ, ಕೆಳದಿ,ಸೊರಬ ಹಾಗೂ ಸಾಗರದಲ್ಲಿ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವು ಬೆಂಗಳೂರಿನ ಕೋಟೆ ಪ್ರೌಢಶಾಲೆಯಲ್ಲಿ ನಡೆಯಿತು. ...
READ MORE