ಲೇಖಕ ರಾಜಶೇಖರ ಮಠಪತಿ (ರಾಗಂ) ಅವರ ಕೃತಿ-ರಕ್ತ ಮತ್ತು ರಾಜಕಾರಣ. ವಿಶ್ವ ರಾಜಕಾರಣದ ಇತಿಹಾಸದಲ್ಲಿ ಯುದ್ಧಗಳು, ಹತ್ಯೆಗಳು ನಡೆದಿವೆ. ಅಮೆರಿಕ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಸೇರಿದಂತೆ ಭಾರತದ ಸುಭಾಶ್ಚಂದ್ರ ಬೋಸ್ ಮುಂತಾದವರು ಬಲಿಯಾದರು. ಇದು ರಕ್ತದ ರಾಜಕಾರಣ. ಕೆಲವೊಂದು ಘಟನೆಗಳಂತೂ ಯಾವ ಸಂಶೋಧನೆಗಳಿಗೂ ಸಿಗುತ್ತಿಲ್ಲ. ಇದರ ಪರಿಣಾಮ, ಗಣ್ಯರ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಹೆಸರು ಖಚಿತವಾಗಿ ಹೇಳುವುದು ಕಷ್ಟು ಸುಭಾಶ್ಚಂದ್ರ ಬೋಸ್ ಅವರ ಅಂತ್ಯವನ್ನು ಇಲ್ಲಿ ಉದಾಹರಿಸಬಹುದು. ಇಂತಹ ಮಹತ್ವದ ಸಂಗತಿಗಳ ಕುರಿತು ಬರೆದ ಕೃತಿ.
ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...
READ MORE