‘ಸಸ್ಯವಿಜ್ಞಾನಿ ಎಂ.ಎಚ್. ಮರೀಗೌಡ’ ಕೃತಿಯು ಆರ್.ವಸಂತಕುಮಾರ್ ಅವರ ಅವರ ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯ ಕೃತಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಕೆ. ಪುಟ್ಟಸ್ವಾಮಿ ಅವರು, ಕರ್ನಾಟಕದಲ್ಲಿ ತೋಟಗಾರಿಕೆ, ಉದ್ಯಾವನಕ್ಕೆ ಸಂಬಂಧಿಸಿದಂತೆ ಒಂದು ಉಜ್ವಲ ಪರಂಪರೆಯಿದೆ. ಹೈದರ್ ಅಲಿ ಮತ್ತು ಟಿಪ್ಪು ರೂಪಿಸಿದ ಲಾಲಾಬಾಗ್ ಈ ಪರಂಪರೆಯ ಕೇಂದ್ರ ಸ್ಥಾನ. ಬ್ರಿಟಿಷರ ಕಾಲದಲ್ಲಿ ಜಾನ್ ಕ್ಯಾಮರೂನ್, ಬಿ.ಎಚ್. ಕೃಂಜೀಗಲ್ ಅವರಿಂದ ಉದ್ಯಾನ ಮತ್ತು ಫಲಪುಷ್ಪ ಕೃಷಿ ಅಭಿವೃದ್ದಿಯಾಯಿತು. ಅನಂತರ ಅದನ್ನು ಉಚ್ಛಾಯ ಸ್ಥಿತಿಗೆ ಕೊಂಡೊಯ್ದವರು ಸಿ.ಎಚ್. ಜವರಾಯ ಎಂಬ ಮಹನೀಯರು, ಮೈಸೂರು ರಾಜರು, ಬ್ರಿಟಿಷ್ ಅಧಿಕಾರಿಗಳ ದೃಷ್ಟಿಯಿಂದ ಕಾರ್ಯಭಾರ ನಿರ್ವಹಿಸಿದರು. ಅವರ ಕಾರ್ಯಕ್ಷೇತ್ರ ನಗರಗಳ ಉದ್ಯಾನ, ನಗರ ಸೌಂದರ್ಯವನ್ನು ಹೆಚ್ಚಿಸುವುದಾಗಿತ್ತು. ಹಸಿವು, ಪೌಷ್ಠಿಕತೆ, ರೈತರ ಆದಾಯ ಆದ್ಯತೆಯಾಗಿರಲಿಲ್ಲ. ಸ್ವಾತಂತ್ಯ್ರಾನಂತರ ಅಧಿಕಾರಿಯಾದ ಮರೀಗೌಡರು ಸಾಮಾನ್ಯ ರೈತರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿದರು. ಹಾಗಾಗಿ ಅವರ ಕಾರ್ಯಕ್ಷೇತ್ರದ ಕೇಂದ್ರವು ಬೆಂಗಳೂರಾದರೂ ಕರ್ನಾಟಕದ ಎಲ್ಲ ಬಗೆಯ ಮಣ್ಣುಗಳ ಮತ್ತು ವಿವಿಧ ಮಳೆಯ ವಲಯಗಳ ಪ್ರದೇಶಗಳಿಗೂ ವ್ಯಾಪಿಸಿತು. ರಾಜ್ಯದ ಸುಮಾರು 375ಕ್ಕೂ ಹೆಚ್ಚು ಸ್ಥಳಗಳಲ್ಲಿ ತೋಟಕ್ಷೇತ್ರಗಳನ್ನು ನಿರ್ಮಿಸಿ ಪ್ರಯೋಗ ಕೈಗೊಂಡ ಸಂಗತಿಯು ಆಧುನಿಕ ಬೇಸಾಯದ ಸಂದರ್ಭದಲ್ಲಿ ಕಂಡರಿಯದ ಮತ್ತು ಕೇಳರಿಯದ ಸಾಧನೆ. ಪ್ರಜಾತಂತ್ರ ಆಡಳಿತಕ್ಕೆ ತಕ್ಕ ಹಾಗೆ ಒಂದು ಇಲಾಖೆಯನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿ ಅವರಿಗೆ ಅದರ ಉದ್ದೇಶಗಳನ್ನು ದಾಟಿಸುವ ವಿಧಾನಕ್ಕೆ ಅವರ ಕಾರ್ಯವಿಧಾನವು ಮಾದರಿ ಎನಿಸಿತು ಎನ್ನುತ್ತಾರೆ.
ಆರ್. ವಸಂತಕುಮಾರ್ ಅವರು ಕಾವ್ಯ, ವಿಮರ್ಶೆ, ಅಂಕಣ ಬರಹ, ಜೀವನಚರಿತ್ರೆ, ವಿಚಾರಸಾಹಿತ್ಯ, ಲಲಿತಪ್ರಬಂಧ ಹಾಗೂ ಸಂಶೋಧನಾ ಬರಹಗಳು ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿರುತ್ತಾರೆ. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕರು. ಹವ್ಯಾಸಿ ಪತ್ರಕರ್ತರು. ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ’ ಲೋಕ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ವಾರ್ತಾಪತ್ರ’ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ನುಡಿ’ ಪತ್ರಿಕೆಯ ಸಂಪಾದಕರಾಗಿದ್ದಾರೆ. ಕೃತಿಗಳು : ತೆರೆಮೆರೆ (2005), ಮನದ ಮಾತು(2009), ಮಂಥನ(2009), ಭಾವನಾ(2011), ಕಡೆಗೋಲು(2013), ಕರ್ನಾಟಕದ ಒಕ್ಕಲಿಗರು(2014), ಡಾ.ಎಂ.ಎಚ್.ಮರಿಗೌಡ(2015), ಜನಮುಖಿ(2015), ಶಕಪುರುಷ ಶಿವರಾಮಕಾರಂತ(2015), ಕಾಯಕಯೋಗಿ ಡಾ. ಎಂ.ಎಚ್.ಎಂ (2015), ಮಣಿದೀಪ(2016), ಸಾಹಿತ್ಯಶೋಧ(2016), ...
READ MORE