ಗರಿ ಬರೆದವನ ವಿವಿಧ ಪರಿ

Author : ಗೋಪಾಲ ಸೋಹೊನಿ

Pages 49

₹ 10.00




Year of Publication: 1989
Published by: ಗೋಪಾಲ ಸೋಹೊನಿ
Address: ಗೋಪಾಲ ಸೋಹೊನಿ ಹುಬ್ಬಳ್ಳಿ – 20

Synopsys

ವರಕವಿ ದ.ರಾ. ಬೇಂದ್ರೆಯವರನ್ನು ಕುರಿತಾದ ಈ ಪುಸ್ತಕ ’ಗರಿ ಬರೆದವನ ವಿವಿಧ ಪರಿ’ಯನ್ನು ಲೇಖಕರೂ,  ಬಹುಭಾಷಾ ಪ್ರವೀಣರೂ ಆದ ಗೋಪಾಲ ಸೋಹೊನಿ ಅವರು ಪ್ರಕಟಗೊಳಿಸಿದ್ದಾರೆ. ಬೇಂದ್ರೆಯ ಕವನ ಸಂಕಲನ ’ಗರಿ’ ರಚನೆಯನ್ನು ನೆನೆದು ’ಗರಿ ಬರೆದವನ ವಿವಿಧ ಪರಿ’ ಎನ್ನುವ  ಶಿರ್ಷೀಕೆಯನ್ನಿಟ್ಟಿದ್ದಾರೆ.

ಬೇಂದ್ರೆ ಕಾವ್ಯಗಳ ಬಗ್ಗೆ ಆತ್ಮೀಯವಾಗಿ ಕಂಡು, ತಿಳಿದಿರುವ ತಮ್ಮ ಆತ್ಮೀಯ ಗೆಳೆಯರ ಜೊತೆಗೂಡಿ ಕಳೆದ, ಬೇಂದ್ರೆಯವರ ಒಡನಾಟದಲ್ಲಿದ್ದ ಸೋಹೊನಿಯವರು ತಮ್ಮ ಲೇಖನಗಳ ಮೂಲಕ ಕೆಲವು ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ವರಕವಿ ಬೇಂದ್ರೆ ನೀಡಿದ ಕಾಣಿಕೆಯನ್ನೆಲ್ಲ ಗೋಪಾಲ ಸೋಹೊನಿಯವರು ವಿವಿಧ ಪರಿಗಳಲ್ಲಿ ಹಂಚಿಕೊಂಡಿದ್ದಾರೆ. 

About the Author

ಗೋಪಾಲ ಸೋಹೊನಿ

ಬಹು ಭಾಷಾ ಪ್ರವೀಣರಾದ  ಗೋಪಾಲ  ಸೋಹೊನಿ ಅವರು ಮರಾಠಿ, ಕನ್ನಡ, ಹಿಂದೀ, ಸಂಸ್ಕೃತ, ಇಂದ್ರಜಿ ಹಾಗೂ ಉರ್ದು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡುವ ಬಹುಭಾಷಾ ಬರಹಗಾರರು ಹಾಗೂ ನಿವೃತ್ತ ಕಾರ್ಯಾಲಯ ಅಧೀಕ್ಷಕರು. ...

READ MORE

Related Books