ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ವಿದ್ಯೆಯನ್ನು ಕಲಿಸಿದ್ದ ಉದ್ಧಾಮ ಪಂಡಿತ, ಆಸ್ಥಾನ ವಿದ್ವಾಂಸ,ವಿದ್ಯಾ ವಾರಿಧಿ, ಕರ್ನಾಟಕ ವಿಭೂಷಣ, ಕೀರ್ತನಾಚಾರ್ಯ, ಪದ್ಮಶ್ರೀ ಬಿರುದಾಂಕಿತರಾಗಿದ್ದ, 'ಶರಣ ಸಾಹಿತ್ಯ' ಮತ್ತು 'ಸ್ವತಂತ್ರ ಕರ್ನಾಟಕ' ವಾರ ಪತ್ರಿಕೆಗಳ ಸಂಪಾದಕರಾಗಿದ್ದ ಕನ್ನಡದ ಕಟ್ಟಾಳು, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಂಚಿನ ಕಂಠದ ವಾಗ್ಮಿ, ನಿಷ್ಟುರತೆ ಹಾಗೂ ಪ್ರಾಮಾಣಿಕತೆಗೆ ಹೆಸರಾದ ಪಂಡಿತ ಡಾ. ಬಿ ಶಿವಮೂರ್ತಿ ಶಾಸ್ತ್ರಿಗಳ ಪುತ್ರ ರೇಣುಕಾ ಪ್ರಸಾದರಿಗೆ, ಲೀಲಾದೇವಿಯನ್ನು ತಂದುಕೊಳ್ಳುವ ಪ್ರಸ್ತಾಪ ಬಂದಾಗ ಅವರು "ಸಾಹೇಬರ ಮಗಳು ಶಾಸ್ತ್ರಿಗಳ ಮನೆಯ ಸೊಸೆಯಾಗಲು ಸಾಧ್ಯವೇ? ಎಂದು ಅನುಮಾನಿಸಿದವರೇ ಮುಂದೆ ಸೊಸೆಯನ್ನು ಬಲು ಮೆಚ್ಚಿಕೊಂಡರು! ಲೀಲಾದೇವಿಯವರು ಬೆಳ್ಳಿಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದರೂ ಅವರ ಬದುಕೇನೂ ಹೂವಿನ ಹಾಸಿಗೆಯಾಗಿರಲಿಲ್ಲ. ವಕೀಲಿ ವೃತ್ತಿಯಲ್ಲಿ ಇನ್ನೂ ನೆಲೆ ಕಂಡಿರದಿದ್ದ ಪತಿ, ವಠಾರದಲ್ಲಿ ಗಾಳಿ ಬೆಳಕಿಲ್ಲದ ಕಿಷ್ಕಿಂದೆಯಂತಹ ಮನೆ, ನಾಲ್ಕು ಮಕ್ಕಳ ಲಾಲನೆ-ಪಾಲನೆಗಳಿಗಾಗಿ, ಬೆಂಬಲಕ್ಕಾಗಿ ತವರನ್ನು ಆಶ್ರಯಿಸದೆ ಸ್ವಾಭಿಮಾನ ಹಾಗೂ ಆತ್ಮವಿಶ್ವಾಸದಿಂದ ಎಲ್ ಐ ಸಿ ಏಜೆಂಟ್ ಆಗಿ, 'ಪ್ರತಿಭಾ' ಪತ್ರಿಕೆಯ ಸಂಪಾದಕರಾಗಿ, ಆಕಾಶವಾಣಿಯಲ್ಲಿ ಭಾಷಣಗಳನ್ನು ಮಾಡಿ ಆರ್ಥಿಕವಾಗಿ ಗಂಡನಿಗೆ ಸಹಕರಿಸಿದ್ದನ್ನು ಲೇಖಕಿ ದಾಖಲಿಸಿದ್ದಾರೆ.
ಎನ್. ಸರಸ್ವತಿ ಅವರು ಸನಾತನ ಧರ್ಮ ಕಾಲೇಜಿನ ಇಂಗ್ಲಿಷ್ ಮತ್ತು ಸಂಶೋಧನಾ ಕೇಂದ್ರದ ಸ್ನಾತಕೋತ್ತರ ವಿಭಾಗದಲ್ಲಿ ಪ್ರಭಾರಿ ಪ್ರಾಂಶುಪಾಲರು ಮತ್ತು ಸಹ ಪ್ರಾಧ್ಯಾಪಕರಾಗಿದ್ದಾರೆ. ಅವರು ಪದವಿಪೂರ್ವ ಮತ್ತು ಸ್ನಾತಕೋತ್ತರ ಹಂತಗಳಲ್ಲಿ 30 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ...
READ MORE