ಸುಬೇದಾರ ರಾಮಜಿ ಸಕ್ಪಾಲ್-ಲೇಖಕ ಪ್ರಭುಲಿಂಗ ನೀಲೂರೆ ಅವರ ಕೃತಿ. ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ ಸುಧಾರಣೆ, ಶೋಷಿತರ ಬಗ್ಗೆ ಅವರಿಗಿರುವ ಕಾಳಜಿ, ಅವರ ವೈಚಾರಿಕ ಚಿಂತನೆ ಇವೆಲ್ಲವೂ ಇಂದು ಬಹುಮಟ್ಟಿಗೆ ತಿಳಿದಿರುವ ಸಂಗತಿಯೇ ಆಗಿದೆ. ಆದರೆ, ಅವರ ಮಹೋನ್ನತ ಚಿಂತನೆ, ಅವರ ಆಗಾಧ ಸಾಧನೆಗೆ ದಾರಿಯಾಗಿದ್ದವರು ಯಾರು ? ಅವರ ಬೆನ್ನ ಹಿಂದಿನ ಬೆಳಕಾಗಿದ್ದವರು ಯಾರು ? ಎಂಬುದನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸುವ ಕೆಲಸವನ್ನು ಲೇಖಕ ಪ್ರಭುಲಿಂಗ ನೀಲೂರೆ ಅವರು ಈ ಸುಬೇದಾರ ರಾಮಜಿ ಸಕ್ಪಾಲ್ ಕೃತಿ ಮೂಲಕ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಅಸ್ಪೃಶ್ಯರ ಸಾಮಾಜಿಕ ಅವಸ್ಥೆಯ ದೀರ್ಘ ಪ್ರಸ್ತಾವನೆ ಯೊಂದಿಗೆ ಆರಂಭವಾಗುವ ಈ ಕೃತಿಯು ಡಾ.ಅಂಬೇಡ್ಕರ್ ಅವರ ತಂದೆ ರಾಮಜಿ ಸಕ್ಪಾಲ್ ಅಂಬೇಡ್ಕರ್ ಅವರಿಗೆ ಅರಿವಿಲ್ಲದಂತೆ ಅವರ ಭಾವಕೋಶವನ್ನು ಹೇಗೆ ತುಂಬಿದರು ? ಅಂಬೇಡ್ಕರ್ ಎಂಬ ವ್ಯಕ್ತಿ, ವ್ಯಕ್ತಿತ್ವವನ್ನು ಯಾವ ಸದ್ದಿಲ್ಲದೆ ಹೇಗೆ ರೂಪಿಸಿದರು ಎಂಬುದನ್ನು ವಿವರಿಸಲಾಗಿದೆ. ಸಿದ್ಧ ನೌಕರಿ, ನಿರ್ದಿಷ್ಟ ಉದ್ಯೋಗವಿಲ್ಲದ ರಾಮಜಿ ಸಕ್ಪಾಲ್, ಒಂದು ಕಡೆ ನೆಲೆ ನಿಲ್ಲಲಿಲ್ಲ. ರತ್ನಗಿರಿ, ಸತಾರ, ಮುಂಬೈ, ಕೋರೆಗಾಂವ ಮುಂತಾದ ಕಡೆ ನಿರಂತರ ತಿರುಗಾಟ ನಡೆಸಿದರು.ಮಕ್ಕಳನ್ನು ಕಟ್ಟಿಕೊಂಡು ಅವರಿಗೆ ಶಿಕ್ಷಣ ಕೊಡಿಸಿದರು. ಭವಿಷ್ಯದ ಬದುಕಿನ ಹಂಬಲ, ತುಡಿತ, ಸಾಹಸಗಾಥೆಯ ವಿವರಣೆಗಳು ಈ ಕೃತಿಯಲ್ಲಿ ಉಲ್ಲೇಖವಾಗಿರುವುದು ಗಮನಾರ್ಹ. ಅಂಬೇಡ್ಕರ್ ಅವರ ಬದುಕಿನ ಒಳಸುಳಿಗಳು, ಅಪರೂಪದ ಮಾಹಿತಿಗಳು ಇಲ್ಲಿವೆ. ಅಂಬೇಡ್ಕರ್ ಎಂಬ ವ್ಯಕ್ತಿತ್ವ ನಿರ್ಮಾಣ ಮಾಡಲು ಉರಿದುಹೋದ, ಸುಟ್ಟುಕೊಂಡ, ಪರಿಸರ, ವಾತಾವರಣ ಯಾವುದು ಎಂಬುದರ ಕುರಿತಾಗಿ ಬೆಳಕು ಬೀರುವ ಈ ಕೃತಿ ಅಂಬೇಡ್ಕರ್ ಅವರ ತಂದೆ ರಾಮಜಿ ಸಕ್ಪಾಲ್ ಅವರನ್ನು ಕನ್ನಡಕ್ಕೆ ಪರಿಚಯಿಸಿದ ಕೃತಿ ಇದು.
ಲೇಖಕ ಹಾಗೂ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದವರು. ಬಿ.ಎಸ್.ಸಿ. ಪದವೀಧರರು. ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಮುಖ್ಯ ಉಪ ಸಂಪಾದಕರು. 1990ರಲ್ಲಿ ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಆರಂಭಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗದ ರಚನೆಕಾರ ಶ್ರೀವಿಜಯನ ಹೆಸರಲ್ಲಿ ರಾಜ್ಯಮಟ್ಟದ ಸಾಹಿತ್ಯಕ ಪ್ರಶಸ್ತಿ ಆರಂಭಿಸಿ, ಸರಕಾರ ಆ ಪ್ರಶಸ್ತಿ ಘೋಷಣೆ ಮಾಡುವವರೆಗೂ ಸಂಸ್ಥೆ ಮೂಲಕ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಬಿಸಿಲನಾಡು ಪ್ರಕಾಶನ ಸಂಸ್ಥೆಯೂ ನಡೆಸುತ್ತಿದ್ದಾರೆ. ಕೃತಿಗಳು: ಅಜ್ಜ ಹೇಳಿದ ಕಲ್ಯಾಣಕ್ರಾಂತಿ ಕಥೆ (ಮಕ್ಕಳ ಕಥನ) ಹುಕುಂಪತ್ರ (ಐತಿಹಾಸಿಕ ನಾಟಕ) -ತತ್ವಪದಕಾರ ಚನ್ನೂರ ...
READ MORE