ಹಿಟ್ಲರ್‌ ಲವ್ ಪಾಲಿಟಿಕ್ಸ್

Author : ಸತೀಶ ಬಳೆಗಾರ

Pages 152

₹ 170.00




Year of Publication: 2023
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

‘ಹಿಟ್ಲರ್‌’ ಲವ್ ಪಾಲಿಟಿಕ್ಸ್ ಸತೀಶ ಬಳೆಗಾರ ಅವರು ರಚಿಸಿರುವ ಹಿಟ್ಲರ್ ಜೀವನಚಿತ್ರಣವಾಗಿದೆ. ಅಸಲು ಹಿಟ್ಲರ್ ಜರ್ಮನಿಯವನೇ ಅಲ್ಲ. ಹಿಟ್ಲರ್ ಹುಟ್ಟಿದ್ದು ಆಸ್ಟ್ರಿಯಾದಲ್ಲಿ! ಆದರೆ ನ೦ಬರ್ ಒನ್ ದೇಶವನ್ನಾಗಿ ಮಾಡಲು ಹೊರಟಿದ್ದು ಜರ್ಮನಿಯನ್ನು!! ಮಹಾಯುದ್ಧ ಮಾಡುವ ಬದಲು ದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದ್ದರೆ ಜರ್ಮನಿ ಇವತ್ತಿಗೆ, ಅಮೇರಿಕವನ್ನು ಕಾಲಕೆಳಗೆ ಕೆಡವಿಕೊಂಡಿರುತ್ತಿತ್ತು. ಹಿಟ್ಲರ್ ಒಬ್ಬ ದಾರಿ ತಪ್ಪಿದ ದೇಶ ಭಕ್ತ. ನಾಜಿ ಕ್ಯಾಂಪಿನಲ್ಲಿ ಆರು ಮಿಲಿಯನ್ನಿಗೂ ಹೆಚ್ಚು ಜನರನ್ನು ಹತ್ಯೆಗೈದ ಪಾತಕಿ, ಪುರಾಣದಲ್ಲಿ ಕಂಡು ಬರುವ ರಾಕ್ಷಸರನ್ನೂ ಕ್ರೂರತನದಲ್ಲಿ ನಾಚಿಸುವ, ಮನುಷ್ಯರಲ್ಲೇ ಕಾಣಿಸಿಕೊಂಡ ನಂಬರ್ ಒನ್ ಸೈಕ್ ಅಂದರೆ ಅದು ಹಿಟ್ಲರ್. ಆತನಿಂದಾಗಿ ಯುದ್ಧದ ನೆಪದಲ್ಲಿ ಲಕ್ಷಾಂತರ ಜನರು ಸತ್ತು ಹೋದರು. ಈ ಜಗತ್ತು ಕಂಡ ಅತ್ಯಂತ ದುಷ್ಟ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಕೊನೆಗೆ ಸತ್ತು ಹೋಗಿದ್ದು ಮಾತ್ರ ಆತ್ಮಹತ್ಯೆಮಾಡಿಕೊ೦ಡು!! ಹಿಟ್ಲರ್‌ ನಾಯಕನಾಗಿ ಬೆಳೆದದ್ದು ಹೇಗೆ? ಸರ್ವಾಧಿಕಾರಿಯಾಗಿ ಯಶಸ್ಸು ಗಳಿಸಿದ್ದು ಹೇಗೆ? ನಾಜಿಸಂ ಎಲ್ಲಿಂದ, ಯಾವಾಗ ಪ್ರಾರಂಭವಾಯಿತು? ಹಿಟ್ಲರ್ ಬದುಕಿನಲ್ಲಿ ಬಂದು ಹೋದ ಮಹಿಳೆಯರು ಎಷ್ಟು? ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

About the Author

ಸತೀಶ ಬಳೆಗಾರ

ಸತೀಶ ಬಳೆಗಾರ ಇವರು ಕುಂದಾಪುರ ತಾಲೂಕಿನ ಸಿದ್ದಾಪುರದವರು. ವೃತ್ತಿಯಲ್ಲಿ ವ್ಯಾಪಾರಿ. ಪ್ರವೃತ್ತಿಯಲ್ಲಿ ಲೇಖಕ. ಶಂಕರ್ ನಾಗ್ ದಿ ಲೆಜೆಂಡ್ ಸೇರಿದಂತೆ ಇದುವರೆಗೆ ಹತ್ತು ಕೃತಿಗಳನ್ನು ರಚಿಸಿರುತ್ತಾರೆ. 'ಧೈರ್ಯ ಅಂದರೆ ಏನು' ಇದು ಇವರ ಮೊದಲ ಕೃತಿ. ಈ ಕೃತಿ 2008 ರಲ್ಲಿ ಬಿಡುಗಡೆಗೊಂಡಿತ್ತು. ಗೆಲುವಿಗಾಗಿ ಧ್ಯಾನ, ಚಾಣಕ್ಯ, ನರೇಂದ್ರ ಮೋದಿ, ಫರ್ಸ್ಟ್ ಪೆಗ್ ಇವರು ಬರೆದಿರುವ ಪ್ರಮುಖ ಕೃತಿಗಳು. ಇದರಲ್ಲಿ ಚಾಣಕ್ಯ ಪುಸ್ತಕ ಮೂರು ಬಾರಿ ಮರು ಮುದ್ರಣಗೊಂಡಿದೆ. ಉದಯವಾಣಿ, ಹೊಸ ದಿಗಂತ, ತರಂಗ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನ, ಕಥೆಗಳು ಪ್ರಕಟವಾಗಿವೆ. ಕೃತಿಗಳು: ಶಂಕರ್ ನಾಗ್ ...

READ MORE

Related Books