ಖ್ಯಾತ ಲೇಖಕ ಡಾ. ಮಹಾಬಲೇಶ್ವರ ರಾವ್ ಅವರ ’ಪಾವ್ಲೊ ಫ್ರೆಯರೆ’ ಕೃತಿಯು ಫ್ರೆಯರೆಯ ಜೀವನ ಚಿತ್ರಣವನ್ನು ತಿಳಿಸುತ್ತದೆ. ಪ್ರಸ್ತುತ ಕೃತಿಯಲ್ಲಿ ಎರಡು ಭಾಗಗಳಿದ್ದು ಮೊದಲ ಭಾಗದಲ್ಲಿ ಫ್ರೆಯರೆ ಜೀವನ ವಿವರಗಳು ಮತ್ತು ಅವರ ಸಾಮಾಜಿಕ ರಾಜಕೀಯ ಶೈಕ್ಷಣಿಕ ವಿಚಾರಧಾರೆಯನ್ನು ಸಂಗ್ರಹವಾಗಿ ನೀಡಲು ಪ್ರಯತ್ನಿಸಲಾಗಿದೆ. ಎರಡನೆಯ ಭಾಗದಲ್ಲಿ ಅವರ ’ಪೆಡಗಾಗಿ ಆಫ್ ದ ಒಪ್ರೆಸ್ಡ್’, ’ಕಲ್ಚರಲ್ ಆಕ್ಷನ್ ಫಾರ್ ಫ್ರೀಡಮ್’ ಹಾಗೂ ’ ಎಜ್ಯುಕೇಶನ್ ಫಾರ್ ಕ್ರಿಟಿಕಲ್ ಕಾನ್ಯಿಯಸ್ ನೆಸ್’ ಗ್ರಂಥಗಳಿಂದ ಆಯ್ದ ಲೇಖನಗಳ ಸಾರವನ್ನು ನೀಡಲಾಗಿದೆ. ಇವು ಯಥಾವತ್ತಾದ ಅನುವಾದಗಳಲ್ಲ; ಫ್ರೆಯರೆ ಅವರ ಚಿಂತನ ಕ್ರಮವನ್ನು, ವಿಚಾರಧಾರೆಯನ್ನು ಚಂದವಾಗಿ ಸಂಗ್ರಹಿಸಿಕೊಡುವ ಪ್ರಯತ್ನವಾಗಿದ್ದು, ಈ ಲೇಖನಗಳು ಫ್ರೆಯರೆ ಅವರ ಕ್ರಾಂತಿಕಾರಿ ಆಲೋಚನಾ ಕ್ರಮಗಳಿಗೆ ಈ ಕೃತಿ ತೋರುಗಾಣಿಕೆಯಾಗಿದೆ.
ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ. ...
READ MORE