ಡಿ.ಡಿ ಕೊಸಾಂಬಿ

Author : ವಸಂತರಾಜ ಎನ್.ಕೆ

Pages 137

₹ 85.00




Year of Publication: 2011
Published by: ಚಿಂತನಾ ಪುಸ್ತಕ
Address: #1863, 11ನೇ ಮುಖ್ಯ ರಸ್ತೆ, 38ನೇ ಅಡ್ಡರಸ್ತೆ, 4 ಟಿ. ಬ್ಲಾಕ್ ಜಯನಗರ. ಬೆಂಗಳೂರು-560041
Phone: 9902249150

Synopsys

ಲೇಖಕ ವಸಂತರಾಜ ಎನ್.ಕೆ ಅವರ ಡಿ .ಡಿ ಕೊಸಾಂಬಿ ಅವರ ವ್ಯಕ್ತಿತ್ವ ಚಿತ್ರಣದ ಕೃತಿ. ಡಿ .ಡಿ ಕೊಸಾಂಬಿ ನಮ್ಮ ದೇಶದ ಸಮಾಜ ಮತ್ತು ಪ್ರಾಕೃತಿಕ ವಿಜ್ಞಾನಕ್ಕೆ ಕೊಡುಗೆ ನೀಡಿದ ಅಪರೂಪದ ವಿಜ್ಞಾನಿಗಳಲ್ಲೊಬ್ಬರು. ಭಾರತದ ಇತಿಹಾಸ ರಚನೆಗೆ ಮೂಲಭೂತ ಕಾಣಿಕೆ ನೀಡಿದ, ಅಣು ಯುದ್ಧದ ವಿರುದ್ಧ ವಿಶ್ವ ಶಾಂತಿಗೆ, ವಿಜ್ಞಾನದ ಸದ್ಬಳಕೆಗೆ ದನಿ ಎತ್ತಿದವರು. ಮಾರ್ಕ್ಸ್‌ನ ವಿಚಾರಧಾರೆಯನ್ನು ಭಾರತ ಚರಿತ್ರೆ ರಚನೆಗೆ ಆಳವಡಿಸಿಕೊಂಡ ಆರಂಭದ ವಿದ್ವಾಂಸರು. ಶಾಸನ ಹಾಗೂ ಶಾಸ್ತ್ರ ಗ್ರಂಥಗಳನ್ನಲ್ಲದೆ ನಾಣ್ಯಗಳು, ಪುರಾತತ್ವ ಅಂಶಗಳು, ಭಾಷಾಶಾಸ್ತ್ರ, ಜನಪದ ಹೀಗೆ ಹತ್ತು ಹಲವು ಮೂಲಗಳಿಂದ ವಿಚಾರಗಳನ್ನು ಸಂಗ್ರಹಿಸವ ಮೂಲಕ ಚರಿತ್ರೆ ಬರವಣಿಗೆಗೆ ವಿಸ್ತಾರವಾದ ನೆಲಗಟ್ಟನ್ನು ಹಾಕಿದರು. ಮೂಲತಃ ಗಣಿತ ಶಾಸ್ತ್ರಜ್ಞರಾಗಿದ್ದು ಚರಿತ್ರೆ ಬರವಣಿಗೆಯ ಮೂಲಕ ಭಾರತದ ಜನರನ್ನು ತಿಳಿಯತೊಡಗಿದರು. ಕೊಸಾಂಬಿಯವರ ವಿಚಾರಗಳಂತೆ ಅವರ ಬದುಕು ಸಾಹಸಮಯವಾಗಿದೆ ಎಂಬುದು ಈ ಕೃತಿಯಿಂದ ಅರಿಯಬಹುದು. ಕರ್ನಾಟಕದ ಜನತೆಗೆ ಕನ್ನಡದಲ್ಲಿ ಕೊಸಾಂಬಿಯವರ ಜೀವನ, ಕೃತಿ, ಕೊಡುಗೆಗಳ ಬಗ್ಗೆ ಸಮಗ್ರ ಪರಿಚಯ ನೀಡುವ ಪ್ರಯತ್ನವೇ ಈ ಕೃತಿಯಾಗಿದೆ.

About the Author

ವಸಂತರಾಜ ಎನ್.ಕೆ

ಲೇಖಕರು, ಅನುವಾದಕರಾದ ವಸಂತರಾಜ ಎನ್.ಕೆ ಅವರು ‘ಹಸಿವಿನ ಸಾಮ್ರಾಜ್ಯಕ್ಕೆ ಕೊನೆಯೆಂತು’ ಮತ್ತು ‘ಪ್ಯಾಲಸ್ತೀನ್ ಪ್ರಶ್ನೆ’ ಹಾಗೂ ಡಿ.ಡಿ. ಕೋಸಾಂಬಿ (ವ್ಎಂಯಕ್ಬತಿ ಚಿತ್ರಣ)  ಮೂರು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books