ಸಾಲುಮರದ ತಿಮ್ಮಕ್ಕ ಎಂತಲೇ ಚಿರಪರಿಚಿತರಾದ ವೃಕ್ಷಮಾತೆ ತಿಮ್ಮಕ್ಕ. ಇವರ ಬದುಕು-ಸಾಧನೆಗಳ ಕುರಿತು ಸಂಪೂರ್ಣ ಮಾಹಿತಿ ನೀಡುವ ಕೃತಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ.
ಈ ಕೃತಿಯಲ್ಲಿ ಮಮತೆಯ ಮುಕುಟ: ಮರ, ಮಾದರಿ ಮಹಿಳೆಯರು, ತಿಮ್ಮಕ್ಕನವರ ಮನೆತನದ ಪೂರ್ವವೃತ್ತಾಂತ, ತಿಮ್ಮಕ್ಕನವರ ಜನನ ಮತ್ತು ಬಾಲ್ಯ, ತ್ಯಾಗಜೀವಿಗಳ ಸಂಗಮ, ಮರಗಳಲ್ಲಿ ಮಕ್ಕಳನ್ನು ಕಂಡ ಮಹನೀಯರು, ಮರೆಯಾದ ಮಹಾಶಯ, ಮರಗಳು ಕೊಟ್ಟ ಮಂದಹಾಸ, ತಿಮ್ಮಕ್ಕನವರ ವ್ಯಕ್ತಿತ್ವ, ಅಂದು ಗುಡಿಸಲು; ಇದು ಗುಡಿ ವಿಷಯದ ಕುರಿತು ಸಂಪೂರ್ಣ ಮಾಹಿತಿಯು ಈ ಕೃತಿ ಒಳಗೊಂಡಿದೆ.
ಚಿತ್ರದುರ್ಗ ತಾಲೂಕು ಭರಮಸಾಗರ ಹೋಬಳಿ ನೆಲ್ಲಿಕಟ್ಟೆ ಗ್ರಾಮದಲ್ಲಿ ಸಿದ್ದಪ್ಪ ಮಾರಕ್ಕ ದಂಪತಿಯ ಮಗನಾಗಿ 1972ರ ಮಾರ್ಚ್ 4ರಂದು ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಜನಿಸಿದರು. ಬಿ.ಎ.ಪದವಿಯನ್ನು 7ನೇ ರ್‍ಯಾಂಕ್ ಬಿ.ಇಡಿ.ಪದವಿ ಚಿನ್ನದ ಪದಕ. ಎಂ.ಎ.ಪದವಿ 3ನೇ ರ್‍ಯಾಂಕ್ ಪಡೆದಿದ್ದು, ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳು-ಒಂದು ಅಧ್ಯಯನ-ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ (2004) ಪಿಎಚ್.ಡಿ.ಪದವಿ ನೀಡಿದೆ. ಬಿಸಿಲು ಮಳೆ. ಛಲಬೇಕು ಶರಣಂಗೆ. ವ್ಯಕ್ತಿತ್ತ ವಿಕಾಸ ಹಾಗೂ ಕನ್ನಡ ಸಾಹಿತ್ಯ. ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ. ಸಿರಿಗನ್ನಡ ಜಾನಪದ. ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ. ಯುವ ಜನತೆ ಮತ್ತು ದುಶ್ಚಟಗಳು. ಸಿರಿಗನ್ನಡ ಪ್ರಾಚೀನ ಕವಿಗಳು. ಕನಕದಾಸರ ...
READ MORE