ವೇದಾಂತ ದೇಶಿಕರು ಜೀವನಚರಿತ್ರೆ ಪುಸ್ತಕವನ್ನು ಲೇಖಕ ಎನ್. ಅನಂತರಂಗಾಚಾರ್ ಅವರು ರಚಿಸಿದ್ದಾರೆ. ವೇದಾಂತ ದೇಶಿಕರು ಅವರ ಬಾಲ್ಯ ಜೀವನ, ವೇದಗಳತ್ತ ತೋರಿದ ಉತ್ಸಾಹ, ಬದುಕಲ್ಲಿ ತೆಗೆದುಕೊಂಡ ಮುಖ್ಯ ನಿರ್ಧಾರಗಳು, ಈ ನಿರ್ಧಾರಗಳು ಹೇಗೆ ಅವರ ಬದುಕಿನ ದಿಕ್ಕನ್ನು ಬದಲಾಯಿಸಿದವು, ಅಪಾರ ಪಾಂಡಿತ್ಯ, ಜನರೊಂದಿಗಿನ ಅವಿನಾಭಾವ ಸಂಬಂಧ, ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತ ಪರಿ ಹೀಗೆ ಅವರ ಬದುಕಿನ ವಿವಿಧ ಘಟ್ಟಗಳನ್ನು ಲೇಖಕರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ಪ್ರಾಚೀನ ಸಾಹಿತ್ಯದಲ್ಲಿ ಬಹು ಆಸ್ಥೆ ಹೊಂದಿದ್ದ ಎನ್ ಅನಂತ ರಂಗಾಚಾರ್‌ರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ. ಎನ್.ಎಸ್. ಸುಬ್ಬರಾವ್, ಎಂ. ಹಿರಿಯಣ್ಣ, ಎ.ಆರ್. ವಾಡಿಯಾ ಇವರ ಗುರುಗಳು. ‘ಮಲ್ಲಿಕಾರ್ಜುನರ ಸೂಕ್ತಿ ಸುಧಾರ್ಣವ’ ಗ್ರಂಥವನ್ನು ಅಚ್ಚುಕಟ್ಟಾಗಿ ಸಂಶೋಧಿಸಿ ಸಂಕಲಿಸಿ ಅಕಾರಾದಿಯಾಗಿ ಪ್ರಕಟಿಸಿದ್ದಾರೆ. ಹಲವಾರು ಕೈಬರಹದ ಗ್ರಂಥಗಳ ಸಂಶೋಧನೆಗೆ ಮುಂದಾಗಿ ದೇಶದ ಒಳಗೂ ಹೊರಗೂ ಸಂಚಾರ ಕೈಗೊಂಡರು. ಇವರ ಪ್ರಮುಖ ಕ್ಷೇತ್ರ ಗ್ರಂಥ ಸಂಪಾದನೆ, ಸಂಶೋಧನೆ, ಸಾಹಿತ್ಯ ಚರಿತ್ರೆ ರಚನೆಗಳು. ಸೂಕ್ತಿ”ಸುಧಾರ್ಣವ’ದ 2000 ಪದ್ಯಗಳಿಗೆ, ಕಾವ್ಯಸಾರದ 3500 ಪದ್ಯಗಳಿಗೆ ತುಲನಾತ್ಮಕವಾಗಿ, ಕ್ರೋಢಿಕರಿಸಿ ಅಕಾರಾದಿಯನ್ನು ...
READ MORE