ಕರುಣಾಮಯಿ ಸುಭಾಶ್ಚಂದ್ರ ಪಾಟೀಲ

Author : ಶಿವಕವಿ ಹಿರೇಮಠ ಜೋಗೂರ

Pages 48

₹ 0.00




Year of Publication: 2017
Published by: ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್
Address: 4ನೇ ಅಡ್ಡರಸ್ತೆ, ಶೆಟ್ಟಿ ಕಟ್ಟಡ, ವಿಠಲ್ ನಗರ, ಕಲಬುರಗಿ.
Phone: 09731555117

Synopsys

ಲೇಖಕ ಶಿವಕವಿ ಹಿರೇಮಠ ಜೋಗೂರ ಅವರ ಕೃತಿ-ಕರುಣಾಮಯಿ ದಿ. ಸುಭಾಶ್ಚಂದ್ರ ಪಾಟೀಲ. ಊರ ಹಿತಕ್ಕಾಗಿ ಬಾಳಿ ಬದುಕಿದವರು, ಜನರ ಹಿತಕ್ಕಾಗಿ ಗ್ರಾಮದಲ್ಲಿ ಕೆರೆ ಬಾವಿ ನಿರ್ಮಿಸಿ ತ್ಯಾಗದ ಕಥೆ ಬರೆದವರು ಹಲವರು. ರಾಜ ಮಹಾರಾಜರು ದೊಡ್ಡಪ್ರಮಾಣದಲ್ಲಿ ಮಾಡಿದರೆ, ಗೌಡರು ಕುಲಕರ್ಣಿಯವರು ದೇಸಾಯಿ ದೇಶಮುಖರು ಸಣ್ಣ ಪ್ರಮಾಣದಲ್ಲಿ ಸೇವೆ ಮಾಡಿದ್ದಾರೆ. ಹಾಗೆ, ಪಾಳಾ ಗ್ರಾಮದ ಸುಭಾಶ್ಚಂದ್ರ ಪಾಟೀಲರು ತಮ್ಮ ಶಕ್ತಿ ಸಾಮರ್ಥ್ಯ ಮಿತಿ ಮೀರಿಯೂ ಅನೇ ಉತ್ತಮ ಕಾರ್ಯಗಳನ್ನು ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡವರು. ಬಡವರ ದನಿಯಾದವರು. ದೀನ ದಲಿತರ ಕೂಗು ಆಲಿಸಿದವರು.ತಮ್ಮ ಕೈಲಾದಷ್ಟು ಒಳಿತು ಮಾಡಿದವರು. ಭೀಕರ ಬರಗಾಲದಲ್ಲಿ ಅನೇಕರಿಗೆ ಸಹಾಯ ಸಹಕಾರ ನೀಡಿದರು ಅಂತಹವರ ಸಂಕ್ಷಿಪ್ತ ಜೀವನಚರಿತ್ರೆಯ ಕೃತಿ ಇದು. 

About the Author

ಶಿವಕವಿ ಹಿರೇಮಠ ಜೋಗೂರ
(02 April 1957)

ಲೇಖಕ ಶಿವಕವಿ ಹಿರೇಮಠ ಜೋಗುರ ಅವರು ಕಲಬುರಗಿ ಜಿಲ್ಲೆಯ ಜೋಗೂರ ಹಿರೇಮಠ ಸಂಸ್ಥಾನದ ವೀರಮಾಹೇಶ್ವರ ವಂಶಜರು. ತಂದೆ ಚಿತ್ರಶೇಖರಯ್ಯ ತಾಯಿ ಗಂಗಮ್ಮ .ಇವರ ಮೂಲ ಹೆಸರು ಶಿವಪೂಜಯ್ಯ. ಆದರೆ, ಕಾವ್ಯನಾಮ ಶಿವಕವಿ . ಪುರಾಣ ಪ್ರವಚನದೊಂದಿಗೆ ಸಾಹಿತ್ಯದ ಸೇವೆಯೂ ಇವರನ್ನು ಆಕರ್ಷಿಸಿದೆ.  ತಮ್ಮದೇ ಆದ ಜ್ಞಾನಗಂಗಾ ಪ್ರಕಾಶನ ಸ್ಥಾಪಿಸಿದ್ದಾರೆ. ಕಲಬುರಗಿ ತಾಲೂಕಿನ ಹೊನ್ನಕಿರಣಗಿಯ ಶ್ರೀಮಠದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದಿದ್ದು 10ನೇ ತರಗತಿಯವರೆಗೆ ಮಾತ್ರ. 9ನೇ ವಯಸ್ಸಿನಲ್ಲೇ ನಾಟಕರಂಗದತ್ತ ಆಕರ್ಷಿತರಾಗಿ, ಮುಂದೆ 1977ರಲ್ಲಿ ಶ್ರೀ ಮಹಾಲಕ್ಷ್ಮಿ ಕೃಪಾಪೋಷಿತ ನಾಟ್ಯ ಸಂಘ ಸ್ಥಾಪಿಸಿದರು. 1982ರಲ್ಲಿ, ಗಂವಾರದಲ್ಲಿ ಶ್ರೀ ವಿಶ್ವಾರಾಧ್ಯ ನಾಟ್ಯ ಸಂಘ ಸ್ಥಾಪಿಸಿದರು. ...

READ MORE

Related Books