ಸ್ವಾತಂತ್ಯ್ರ ಹೋರಾಟಗಾರ, ಅಹಿಂಸಾತ್ಮಕ ಮಾರ್ಗದಲ್ಲಿ ಸ್ವಾತಂತ್ಯ್ರ ಪಡೆಯಬೇಕೆಂದು ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ.
ಗಾಂಧೀಜಿ: ಒಬ್ಬ ಅನುಷ್ಠಾನ ತತ್ವದರ್ಶಿ ಕೃತಿಯು ಗಾಂಧೀಜಿಯವರ ಚಿಂತನೆ- ಬದುಕಿನ ಕುರಿತು ಇಲ್ಲಿನ ಲೇಖನಗಳನ್ನು ಚಿತ್ರಣ ನೀಡುತ್ತವೆ. ಗಾಂಧೀಜಿಯ ತತ್ವಗಳು ಹಾಗೂ ಚಿಂತನೆಗಳ ವಿವಿಧ ಮುಖಗಳನ್ನು ಕೃತಿಯು ಪರಿಚಯಿಸಿದೆ. ಮಹಾತ್ಮ ಗಾಂಧಿಯವರ ಚಿಂತನೆ ಕುರಿತು ಅಧ್ಯಯನ ನಡೆಸುವವರಿಗೆ ಈ ಕೃತಿಯು ಸಹಕಾರಿಯಾಗಬಲ್ಲದು. ಇದರಲ್ಲಿ ಗಾಂಧೀಜಿಯವರ ಜೀವನಮಾರ್ಗ ಮತ್ತು ಬೋಧನೆಗಳು, ಗಾಂಧೀಜಿಯವರ ತತ್ತ್ವದರ್ಶನದ ರೂಪರೇಖೆಗಳು ಹಾಗೂ ಸಾರ್ವಜನಿಕ ಆಡಳಿತ ಗಾಂಧಿಯವರ ಪರಿಕಲ್ಪನೆಯ ಕುರಿತು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು. ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು. 1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...
READ MORE