ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 292ನೇ ಪುಸ್ತಕ ‘ಪದ್ಮಶ್ರೀ ಡಾ. ಗಿರೀಶ ಭಾರದ್ವಾಜ’.
ಗ್ರಾಮೀಣ ಅಭಿವೃದ್ದಿ ಹಾಗೂ 129 ತೂಗು ಸೇತುವೆಗಳ ನಿರ್ಮಾಣಕ್ಕಾಗಿ ರಾಷ್ಟ್ರದ ಉನ್ನತ ಪ್ರಶಸ್ತಿ 'ಪದ್ಮಶ್ರೀ' ಗೌರವಕ್ಕೆ ಪಾತ್ರರಾಗಿರುವ, ತೂಗುಸೇತುವೆಗಳ ಸರದಾರ ಡಾ.ಗಿರೀಶ ಭಾರದ್ವಾಜ ಅವರ ಬದುಕಿನ ಚಿತ್ರಣವನ್ನು ಈ ಕೃತಿ ಸಂಕ್ಷಿಪ್ತವಾಗಿ ತಿಳಿಸುತ್ತದೆ.
ಒಂದೊಂದು ಸೇತುವೆಯ ಹಿಂದೆ ಒಂದೊಂದು ಗ್ರಾಮ- ಸಮಾಜದ ಕಷ್ಟ ಹಾಗೂ ಅದನ್ನೆದುರಿಸುವ ಛಲದ ರೀತಿ ಮತ್ತು ಗಿರೀಶರ ಸಾಧನೆಯ ಕಥೆ ಇಲ್ಲಿದೆ.
ಕುಮಾರಸ್ವಾಮಿ ತೆಕ್ಕುಂಜ ಅವರು ಇಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಮುಂಬಯಿಯಲ್ಲಿ 'ಫಿಯಟ್ ಅಟೊಮೊಬೈಲ್ ಕಂಪೆನಿ'ಯ ತಾಂತ್ರಿಕ ವಿಭಾಗದಲ್ಲಿ ಮತ್ತು ಐದು ವರ್ಷ ಮಹಾರಾಷ್ಟ್ರದ ನಾಸಿಕದಲ್ಲಿ 'ಮಹೀಂದ್ರ ಮತ್ತು ಮಹೀಂದ್ರ ಕಂಪೆನಿಯಲ್ಲಿ ಕೆಲಸಮಾಡಿ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿ ನಲ್ಲಿರುವ 'ಜನರಲ್ ಮೋಟರ್ ಟೆಕ್ನಿಕಲ್ ಸೆಂಟರ್'ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆ ನಿಂತ ಮೇಲೆ, ಹವಿಗನ್ನಡದ ಬ್ಲೊಗುಚ್ಛ 'ಒಪ್ಪಣ್ಣ. ಕಾಂ'ನಲ್ಲಿ 2011ರಿಂದ ಬರೆಯಲು ಆರಂಭಿಸಿದ್ದು, ಇದೀಗ, ನಿವೃತ್ತಿಯ ಅಂಚಿನಲ್ಲಿರುವ ಸಮಯದಲ್ಲಿ ಕನ್ನಡದಲ್ಲಿಯೂ ಬರೆಯಲು ತೊಡಗಿಸಿಕೊಂಡಿದ್ದಾರೆ. ದೇನೆ. ಕನ್ನಡ ಪೌರಾಣಿಕ ಕಾದಂಬರಿ 'ಮಂಡೋದರಿ' ...
READ MORE