ಅಧ್ಯಾತ್ಮ ಜೀವಿ ಶ್ರೀ ರಾಮಕೃಷ್ಣರ ಬದುಕು-ಸಾಧನೆ ಕುರಿತಂತೆ ವಿವಿಧ ಲೇಖಕರು ಬರೆದ ಲೇಖನಗಳ ಸಂಗ್ರಹ ವೇ ಈ ಕೃತಿ. ಶ್ರೀ ರಾಮಕೃಷ್ಣ ಪರಮಹಂಸರ ಬಗ್ಗೆ ಈಗಾಗಲೇ ಹತ್ತು ಹಲವು ಕೃತಿಗಳು ಮೂಡಿ ಬಂದಿವೆ. ಆದರೆ, ಅವರು ಶ್ರೀ ರಾಮಕೃಷ್ಣರ ಒಂದು ಆಯಾಮವನ್ನು ಕೇಂದ್ರೀಕರಿಸಿವೆ. ಸಮಗ್ರ ವ್ಯಕ್ತಿತ್ವವನ್ನು, ಅಧ್ಯಾತ್ಮಕತೆಯ ಸಮಗ್ರ ಚಿತ್ರಣವನ್ನುನೀಡುವಲ್ಲಿ ಈ ಬೃಹತ್ ಸಂಪುಟವು ಯಶಸ್ವಿಯಾಗಿದೆ.