ತಮಗೆದುರಾದ ಆತಂಕ, ದುರಂತ, ನಿಸ್ಸಹಾಯಕತೆಗಳನ್ನೇ ಅಸ್ತಿವಾರ ಬಂಡೆಯಾಗಿ ಪರಿವರ್ತಿಸಿ ಸೇವೆ ಶುಷ್ರೂಷೆಗಳಲ್ಲಿ ತಮ್ಮನ್ನು ತೇಯ್ದುಕೊಂಡ ಸನ್ಯಾಸಿನಿಯರ ಅತ್ಯಾಧುನಿಕ ಮಾದರಿ ಈ ಕುಸುಮಕ್ಕ. ಹೋರಾಟಗಳಲ್ಲಿ ಸಾವಿಗೆ ಸವಾಲು ಹಾಕಿದವರು ಅವರು. ಕಗ್ಗಾಡಿನ ಕಿರುರಸ್ತೆಯಲ್ಲಿ, ಕೈಗಾ ಗುಂಡಿಯಲ್ಲಿ, ಶರಾವತಿಯ ಜಲಧಾರೆಯಲ್ಲಿ, ಪೋಲೀಸರ ಕಾರ್ಯಾಚರಣೆಯಲ್ಲಿ, ಮರಕಟುಕರ ದಾಳಿಯಲ್ಲಿ, ಜೈಲಿನಲ್ಲಿ, ಉಪವಾಸ ಸತ್ಯಾಗ್ರಹದಲ್ಲಿ ಹೀಗೆ ನಾನಾ ಹೋರಾಟಗಳಲ್ಲಿ ಭಾಗವಹಿಸಿದ್ದ ಕುಸುಮಾ ಅವರ ಬದುಕಿನ ಕುರಿತು ಲೇಖಕರಾದ ನಾಗೇಶ್ ಹೆಗಡೆ ಅವರು ಬರೆದಿದ್ದಾರೆ.
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...
READ MORE