ಮಿರ್ಜಾ ಮೊಹಮದ್ ಇಸರುಲ್ಲಾಹ್ ಖಾನ್ ಗಾಲಿಬ್ (1797-1869) ಒಂಬತ್ತನೆ ವಯಸ್ಸಿನಲ್ಲಿ ಬರೆದ ಪರ್ಷಿಯನ್ ಕವಿತೆ ಓದಿ ಇವನಿಗೆ ಭವ್ಯ ಭವಿಷ್ಯವಿಗೆ ಎಂದಿದ್ದ ಅಂದಿನ ಪ್ರಮುಖ ಕವಿ ಮಿರ್. ಆದರೆ ಮೂರ್ಖರನ್ನು ಸಹಿಸದ ಅದ್ಭುತ ಕವಿ ಗಾಲಿಗ್ ಗೆ ಅವರ ಯುಗ ಮತ್ತು ಸಮಾಜ ಎರಡೂ ವಿರುದ್ಧವಾಗಿದ್ದವು. ಮುಘಲ್ ಅಸ್ಥಾನದ ಅವನತಿ, ಬ್ರಿಟಿಷ್ ಸಾಮ್ರಾಜ್ಯದ ಉತ್ಕರ್ಷ, 1857ರ ಸ್ವಾತಂತ್ರ್ಯ ಹೋರಾಟ ಎಲ್ಲಕ್ಕೂ ಸಾಕ್ಷಿಯಾಗಿದ್ದ ಅವನ ಪ್ರೀತಿಯಲ್ಲಿ ದಿಲ್ಲಿ ಹಂತಹಂತವಾಗಿ ಗುರುತು ಹಿಡಿಯಲಾರದಂತೆ ಬದಲಾಗಿ ಹೋಗುತ್ತಿದ್ದಾಗಲೆ ಹುಟ್ಟಿತು ಅವರ ಅಮರ ಕಾವ್ಯ. ಹತ್ತೊಂಬತ್ತನೆ ಶತಕದ ಭಾರತದ ಅತ್ಯಂತ ಶ್ರೇಷ್ಠಕವಿ ಗಾಲಿಬ್ ನ ಜ್ವಲಂತ ಜೀವನ ಚರಿತ್ರೆ ಇದು. ಲೇಖಕ ಪವನ್ ಕೆ. ವರ್ಮ ಇಂಗ್ಲಿಷ್ ನಲ್ಲಿ ರಚಿಸಿರುವ ಕೃತಿಯನ್ನು ಬಿದರಹಳ್ಳಿ ನರಸಿಂಹಮೂರ್ತಿ ಕನ್ನಡೀಕರಿಸಿದ್ದಾರೆ.
ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು: ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001), ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...
READ MORE