`ಭದ್ರಾಚಲ ರಾಮದಾಸರು' ಜೀವನ ಚರಿತ್ರೆಯ ಈ ಕೃತಿಯನ್ನು ಲೇಖಕ ತ.ಸು. ಶಾಮರಾಯರು ರಚಿಸಿದ್ದಾರೆ. ಶ್ರೀರಾಮನ ಸೇವೆಯಲ್ಲಿ ಬಾಳನ್ನು ಸಾರ್ಥಕ ಮಾಡಿಕೊಂಡ ಭಕ್ತಶ್ರೇಷ್ಠ. ಜಾತಿಮತಗಳಿಗೆ ಪ್ರಾಮುಖ್ಯತೆ ಕೊಡದೆ ಹಿರಿಮೆಗೆ ತಲೆಬಾಗಿದ ಹಿರಿಯ ಜೀವ. ರಾಮನ ಸೇವೆಯಲ್ಲಿ ಸೆರೆಮನೆ ಕಂಡು ರಾಮನಿಂದ ಬಿಡುಗಡೆ ಪಡೆದ ಧನ್ಯ ವ್ಯಕ್ತಿ ಭದ್ರಾಚಲ ರಾಮದಾಸರು ಎಂದು ಈ ಪುಸ್ತಕದಲ್ಲಿ ಅವರ ಜೀವನದ ಕುರಿತು ಸವಿಸ್ತಾರವಾಗಿ ವಿವರಿಸಲಾಗಿದೆ. ಶ್ರೀ ರಾಮನನ್ನೇ ತನ್ನ ಸರ್ವಸ್ವವೆಂದುಕೊಂಡು ತನ್ನ ಇಡೀ ಜೀವನವನ್ನೇ ಅವನ ಸೇವೆಗಾಗಿ ಮುಡಿಪಾಗಿಟ್ಟು ಜಾತಿ ಮತಗಳನ್ನು ಬದಿಗೆ ಸರಿಸಿ, ಮಾನವ ಕುಲ ಒಂದೇ ಎಂಬುದನ್ನು ಜಗತ್ತಗೇ ಸಾರಿದ ಈತನ ಜೀವನದ ಪ್ರಮುಖ ಘಟ್ಟಗಳನ್ನು ಈ ಕೃತಿಯಲ್ಲಿ ಸರಳ ಕನ್ನಡದಲ್ಲಿ ಚಿತ್ರಿಸಲಾಗಿದೆ.
ತ.ಸು.ಶಾಮರಾಯರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು. ಇವರು (12-06-1906) ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಕುವೆಂಪು ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿ ಪಡೆದು, ಪ್ರಾಧ್ಯಾಪಕ ವೃತ್ತಿ ಕೈಗೊಂಡರು. ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು, ಕನ್ನಡ ನಾಟಕ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ವಿಮರ್ಶಾ ಗ್ರಂಥಗಳು, ಅಜಿತ ಪುರಾಣ ಸಂಗ್ರಹ, ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ 11 ಕಾವ್ಯ ಸಂಗ್ರಹಗಳು), ಮಂಕನ ಮಡದಿ ...
READ MORE