ಜನಪರ ಜಂಗಮ

Author : ಕಲ್ಯಾಣರಾವ ಜಿ. ಪಾಟೀಲ

Pages 90

₹ 50.00




Year of Publication: 2005
Published by: ಕನ್ನಡ ಸಾಹಿತ್ಯ ಪರಿಷತ್ತು
Address: # ಜಿಲ್ಲಾ ಘಟಕ, ಕಲಬುರಗಿ

Synopsys

ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಬದುಕು-ಬರಹ ಮಾಲಿಕೆ ಯಲ್ಲಿ ಡಾ. ಚೆನ್ನಣ್ಣ ವಾಲೀಕಾರ ಅವರ ಜೀವನ-ಸಾಧನೆ ಕುರಿತು ` ಜನಪರ ಜಂಗಮ' ಶೀರ್ಷಿಕೆಯಡಿ, ಕಲಬುರಗಿ ಕ.ಸಾ.ಪ.ದಿಂದ 2005ರಲ್ಲಿ ಪ್ರಕಟವಾಗಿತ್ತು. ನಂತರ, ಬಸವ ಪ್ರಕಾಶನ ಕಲಬುರಗಿಯಿಂದ 2016ರಲ್ಲಿ ಪರಿಷ್ಕೃತ ಆವೃತ್ತಿಯಲ್ಲಿ ಪ್ರಕಟವಾಗಿದೆ. ಕೃತಿಯಲ್ಲಿ 11 ಅಧ್ಯಾಯಗಳಿವೆ. ಕಗ್ಗತ್ತಲ ಖಂಡದೊಳಗೆ ಎಂಬ ಮೊದಲ ಅಧ್ಯಾಯದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಚಾರಿತ್ರಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಹಿತ್ಯಕ ಕ್ಷೇತ್ರಗಳ ಸಂಕ್ಷಿಪ್ತ ಪರಿಚಯವಿದೆ. ಖಡ್ಗದ ಲೇಖನಿಗೆ ನೋವಿನ ಮಿಡಿತ ಎಂಬ 2ನೇ ಲೇಖನದಲ್ಲಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬರುವ ಬಂಡಾಯ ಸಾಹಿತ್ಯ ಘಟ್ಟದ ಸಮೀಕ್ಷೆ ಮಾಡಲಾಗಿದೆ. ತಾಯ್ಗರುಳಿನ ಪ್ರಾಣಮಿತ್ರ ಎಂಬ 3ನೇ ಲೇಖನದಲ್ಲಿ ಚೆನ್ನಣ್ಣ ವಾಲೀಕಾರ ಅವರ ಜೀವನ ಸಾಧನೆಯ ವಿವಿಧ ಮಗ್ಗುಲುಗಳ ಪರಿಚಯವಿದೆ. ಧಿಕ್ಕಾರದ ಹಾಡುಹಕ್ಕಿ ಎಂಬ ಅಧ್ಯಾಯದಲ್ಲಿ ಚೆನ್ನಣ್ಣ ವಾಲೀಕಾರ ಅವರ ಮರದ ಮೇಲಿನ ಗಾಳಿ, ಕರಿ ತೆಲಿ ಮಾನವನ ಜೀಪದ, ಹಾಡಕ್ಕಿ ಹಾಗೂ ಇತರ ಪದಗಳು, ಪ್ಯಾಂಥರ್ ಪದ್ಯಗಳು, ಬಂಡೆದ್ದ ದಲಿತರ ಬೀದಿ ಹಾಡುಗಳು, ಧಿಕ್ಕಾರದ ಹಾಡುಗಳು, ಐದು ಜನಪರ ಸಮಾಜವಾದಿ ಪದ್ಯಗಳು, ವೈರಿಗಳ ಮಧ್ಯ ಎದ್ದ ಕಗ್ಗತ್ತಲೆ ಖಂಡದ ಕಾವ್ಯ, ಮುನ್ನೂರಾ ಮೂರು ವಚನಗಳು ಮತ್ತು ಉರ್ದು ಕವಿತೆಗಳು ಎಂಬ ಹತ್ತು ಕವನ ಸಂಗ್ರಹಗಳ ಸಮೀಕ್ಷೆ ಮಾಡಲಾಗಿದೆ. ಕುತ್ತದಲ್ಲಿ ಕುದ್ದು ಹೆಪ್ಪುಗಟ್ಟಿದವರು ಎಂಬ 5ನೇ ಅಧ್ಯಾಯದಲ್ಲಿ ಚೆನ್ನಣ್ಣ ವಾಲೀಕಾರ ಅವರ ಕಪ್ಪು ಕಥೆಗಳು, ಕುತ್ತದಲ್ಲಿ ಕುದ್ದವರ ಕಥೆಗಳು, ಹೆಪ್ಪುಗಟ್ಟಿದ ಸಮುದ್ರ ಮತ್ತು ಬೋಧಿವೃಕ್ಷದ ಹೂಗಳು ಎಂಬ ನಾಲ್ಕು ಕಥಾ ಸಂಕಲನಗಳನ್ನು ಪರಿಶೀಲಿಸಲಾಗಿದೆ. ಭದ್ರಕೋಟೆಯ ಬಾಗಿಲ ತಟ್ಟಿದ ಬೆಳ್ಯ ಎಂಬ ಆರನೆಯ ಅಧ್ಯಾಯದಲ್ಲಿ ಚೆನ್ನಣ್ಣ ವಾಲೀಕಾರ ಅವರ ಒಂದು ಹೆಣ್ಣಿನ ಒಳಜಗತ್ತು, ಕೋಟೆಬಾಗಿಲು, ಹುಲಿಗೆಮ್ಮ, ಗ್ರಾಮ ಭಾರತ ಮತ್ತು ಬೆಳ್ಯ ಕಾದಂಬರಿಗಳನ್ನು ಪರಿಚಯಿಸಲಾಗಿದೆ. ಟೊಂಕದ ಕೆಳಗಿನವರ ಸಂಕಟ ಎಂಬ ಶೀರ್ಷಿಕೆಯಡಿ ಚೆನ್ನಣ್ಣ ವಾಲೀಕಾರ ಅವರ 11 ನಾಟಕಗಳ ಸಂಕ್ಷಿಪ್ತ ಸಮೀಕ್ಷೆ, ಹರಿವ ನೀರಿಗೆ ಯಾವ ಕುಲ? ಎಂಬ 8ನೇ ಅಧ್ಯಾಯದಲ್ಲಿ ಚೆನ್ನಣ್ಣ ವಾಲೀಕಾರ ಅವರ 11 ಡಪ್ಪಿನಾಟ ಕೃತಿಗಳನ್ನು ಅವಲೋಕಿಸಿದೆ. ಬೆನ್ನ ಹಿಂದಿನ ಬೆಳಕು-ಅಧ್ಯಾಯದಲ್ಲಿ ಚೆನ್ನಣ್ಣ ವಾಲೀಕಾರ ಅವರ ಸಮಗ್ರ ಜಾನಪದ ಸಂಪುಟ ಮತ್ತು ಅವರ ಸಂಶೋಧನ ಕೃತಿಗಳನ್ನು ಪರಿಶೀಲಿಸಿದೆ. . ಕಣ್ಣೀರ ಕಡಲು- ಅಧ್ಯಾಯದಲ್ಲಿ ಚೆನ್ನಣ್ಣ ವಾಲೀಕಾರ ಅವರು ಕರ್ನಾಟಕದ ‘ದೇವದಾಸಿಯರ ಸಂಶೋಧನಾಧ್ಯಯನ’ ಮತ್ತು ‘ಮಹಾರಾಷ್ಟ್ರ ರಾಜ್ಯದ ತುಂಬ ಹರಿಯುತ್ತಿರುವ ವೇಶ್ಯಾ ಸೋದರಿಯರ ಕಣ್ಣೀರ ಕಡಲಿನ ಕೋಗಿಲೆಗಾನ’ ಎಂಬ ಪ್ರವಾಸ ಕಥನಗಳನ್ನು ಪರಿಚಯಿಸಿದೆ. ಹೋರಾಟ ಒಂದೇ ನಮ್ ದಾರಿ ಎಂಬ ಸಮಾರೋಪದ ಅಧ್ಯಾಯದಲ್ಲಿ ಚೆನ್ನಣ್ಣ ವಾಲೀಕಾರ ಅವರ ಒಟ್ಟು ಸಾಹಿತ್ಯಕ ಸಾಧನೆಯ ಫಲಶ್ರುತಿಯನ್ನು ಹಿಡಿದಿಡಲಾಗಿದೆ. ಕೊನೆಗೆ, ಅನುಬಂಧಗಳಲ್ಲಿ ಡಾ. ಚೆನ್ನಣ್ಣ ವಾಲೀಕಾರ ಅವರ ಸಾಧನಾಪಥದ ವಿವರ ಹಾಗೂ ಲೇಖಕರ ಸಂಕ್ಷಿಪ್ತ ಪರಿಚಯ ಕೊಡಲಾಗಿದೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books