ಹೊಸಹಳ್ಳಿ ವಿ. ಸತ್ಯನಾರಾಯಣ ಶಾಸ್ತ್ರೀ ಅವರ ಕುರಿತು ವಿವಿಧ ಲೇಖಕರು, ಶಿಷ್ಯರು ಬರೆದಿರುವ ಲೇಖನಗಳ ಸಂಕಲನ -ಅಮಿತ ಪ್ರಭಾವ. ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳಿಗೆ ದಾರದೀಪವಾಗಿರುವ ಸತ್ಯನಾರಾಯಣ ಅವರ ಬದುಕು-ಬರಹ, ಅವರೊಂದಿಗಿನ ಒಡನಾಟವನ್ನು ನೆನಪಿಸುವ ಲೇಖನಗಳು ಬೆಳಕು ಚೆಲ್ಲಿವೆ. ಮತ್ತೂರು ಸುಬ್ಬಣ್ಣ ಅವರು ಕೃತಿಯ ಸಂಪಾದಕರು. ಸತ್ಯ ನಾರಾಯಣರ ಶಿಷ್ಯವರ್ಗವೇ ಕೃತಿಯನ್ನು ಪ್ರಕಾಶಿಸಿದ್ದರಿಂದ ಕೃತಿಯ ಬೆಲೆ ನಮೂದಿಸಿಲ್ಲ.
ಮಕ್ಕಳ ಕತೆ, ಕವನ, ನಾಟಕ ರಚನೆಯಲ್ಲಿ ಹೆಸರಾಗಿರುವ ಮತ್ತೂರು ಸುಬ್ಬಣ್ಣ ಎಂತಲೇ ಪರಿಚಿತರಾಗಿರುವವರು ಹೊಸಹಳ್ಳಿ ಬಾಲಸುಬ್ರಹ್ಮಣ್ಯ. ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಇವರು ಮಕ್ಕಳ ಕತೆ ಹೇಳುವುದರಲ್ಲಿಯೂ ಸಿದ್ಧರು. ಮಾಡಿದ್ದುಣ್ಣೋ ಮಾಮಣ್ಣ, ಒಂದು ಕುರಿಯ ಕತೆ, ಅಂಶು ಮತ್ತು ರಾಬೊಟ್, ಸಮಯಪ್ರಜ್ಞೆ, ಕಾಡಿನ ಕತೆಗಳು, ಕುಮಾ ಮತ್ತು ಇತರ ಮಕ್ಕಳ ಕತೆಗಳು, ತಮ್ಮಣ್ಣ ಮತ್ತು ಇರುವೆ ರಾಜಕುಮಾರಿ, ವಿಚಿತ್ರ ಸಲಹೆ, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ ಭಾಗ-1, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ-೧, ಹಣ್ಣಿನ ಕಳ್ಳ ...
READ MORE