ರಾಜೇಗೌಡ ಹೊಸಹಳ್ಳಿ

Author : ಹಂಪನಹಳ್ಳಿ ತಿಮ್ಮೇಗೌಡ

Pages 32

₹ 10.00




Year of Publication: 2010
Published by: ಕರ್ನಾಟಕ ಜನಪದ ಪರಿಷತ್ತು
Address: ಜಲದರ್ಶಿನಿ ಲೇಔಟ್‌, ಎಂ.ಎಸ್. ರಾಮಯ್ಯ ಆಸ್ಪತ್ರೆ ಗೇಟ್‌ ಬಳಿ, ನ್ಯೂ ಬಿಇಎಲ್ ರಸ್ತೆ, ಬೆಂಗಳೂರು

Synopsys

ರಾಜೇಗೌಡ ಹೊಸಹಳ್ಳಿ ಅವರು ಸಾಂಸ್ಕೃತಿಕ ಜಾನಪದದವನ್ನು ತಲಸ್ಪರ್ಶಿಯಾಗಿ ದರ್ಶಿಸಿ, ಹೊಸ ಹೊಳಹುಗಳನ್ನು ಹೊರಹೊಮ್ಮಿಸಿದವರು. ಜಾನಪದ ಚಿಂತಕರು. ಅವರ ಚಿಂತನ-ಮಂಥನದಲ್ಲಿ ಜನಪದ-ಶಿಷ್ಟ, ಪ್ರಾಚೀನ-ಅರ್ವಾಚೀನ, ಕನ್ನಡ-ಕನ್ನಡೇತರ, ಸ್ವದೇಶಿ-ವಿದೇಶಿ ಆಲೋಚನೆಗಳು ಸಮತೂಕದಲ್ಲಿ ಮೇಳವಿಸಿರುತ್ತವೆ.  ರಾಜೇಗೌಡ ಹೊಸಹಳ್ಳಿ ಅವರ ಬದುಕು ಬರಹಗಳ ಸ್ಥೂಲ ಪರಿಚಯವನ್ನು ಪ್ರಸ್ತುತ ಕೃತಿಯು ಕಟ್ಟಿಕೊಡುತ್ತದೆ.

About the Author

ಹಂಪನಹಳ್ಳಿ ತಿಮ್ಮೇಗೌಡ

ಲೇಖಕ ಡಾ. ಹಂಪನಹಳ್ಳಿ ತಿಮ್ಮೇಗೌಡ ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಂಪನಹಳ್ಳಿಯವರು ಅಧ್ಯಾಪನ, ಜಾನಪದ ಅಧ್ಯಯನ, ಸಂಘಟನೆ ಮತ್ತು ಸಂವರ್ಧನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಬರಹಗಳಿಗೆ ಗಟ್ಟಿನೆಲೆಯನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಬರವಣಿಗೆಯ ಭದ್ರತೆಗೆ ಮೊದಲು ಗುರುತಿಸಿಕೊಂಡಿರುವುದು ಸತ್ವಶಾಲಿಯಾದ ಜನಪದ ಭೂಮಿ ಹಾಸನದೊಳಗೆ ಇರುತ್ತ ಅದನ್ನೊಂದು ಸಾಂಸ್ಕೃತಿಕ ಅನನ್ಯತೆಯಾಗಿ ನೋಡುವ ಮೂಲಕ ಅದರೊಳಗೆ ಅಡಗಿರುವ ಎಲ್ಲಾ ಜೀವನ ಶ್ರದ್ದೆಗಳನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಅವರಿಗೆ ಮಾನವ ಶಾಸ್ತ್ರಜ್ಞನ ಹುಡುಕಾಟದ ಆಸಕ್ತಿಯೂ ಇದೆ. ಜಾನಪದ ವಿದ್ವಾಂಸನ ಕ್ರಿಯಾಶೀಲ ಮನೋಧರ್ಮವೂ ಇದೆ. ಹೀಗಾಗಿ ಅವರ ಜೀವನ ಹುಟುಕಾಟಕ್ಕೆ ಮೌಲಿಕತೆ ಇದೆ. ...

READ MORE

Related Books