ಉತ್ತಂಗಿ ಚನ್ನಪ್ಪ ಜೀವನಚರಿತ್ರೆ ಯನ್ನು ಲೇಖಕ ಸದಾಶಿವ ಒಡೆಯರ್ ಅವರು ರಚಿಸಿದ್ದಾರೆ. ಉತ್ತುಂಗ ವ್ಯಕ್ತಿತ್ವದ ಕನ್ನಡ ಸಾಹಿತಿ. ಸರ್ವಜ್ಞನ ವಚನಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಕನ್ನಡಿಗರಿಗೆ ಕೊಟ್ಟ ಸಂಶೋಧಕರು. ಎಲ್ಲ ಧರ್ಮಗಳಲ್ಲಿನ ಹಿರಿಮೆಯನ್ನು ಗುರುತಿಸುವ ವಿಶಾಲ ಮನಸ್ಸಿನ ಕ್ರೈಸ್ತ ಮತೋಪದೇಶಕರು. ಜನಕ್ಕಾಗಿ, ಇತರರ ಸೇವೆಗಾಗಿ ಬದುಕಿದವರು ಎಂದು ಉತ್ತಂಗಿ ಚನ್ನಪ್ಪ ಅವರ ಕುರಿತು ಇಲ್ಲಿ ವಿವರಿಸಲಾಗಿದೆ. ಇಲ್ಲಿ ಅವರ ಬಾಲ್ಯ ಜೀವನ, ಶಿಕ್ಷಣ, ಬದುಕಿನ ತಿರುವುಗಳನ್ನು ಲೇಖಕರು ವಿವರಿಸಿದ್ದಾರೆ.
ಪ್ರೊ. ಸದಾಶಿವ ಒಡೆಯರ ಅವರು ಶಿಕ್ಷಣ ತಜ್ಞರು. ಧಾರವಾಡದ ಮರೇವಾಡ ಗ್ರಾಮದವರು. ತಂದೆ ಶಿವದೇವ ಒಡೆಯರ್, ತಾಯಿ ಗಿರಿಜಾದೇವಿ. ಸದಾಶಿವರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ನಡೆಯಿತು. ಆಟದಲ್ಲಿ ಸದಾ ಮುಂದಿದ್ದ ಅವರಿಗೆ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಪ್ರಿಯವಾದ ಆಟಗಳಾಗಿದ್ದವು. ಧಾರವಾಡದಲ್ಲಿ 1945ರಲ್ಲಿ ಬಿ.ಎ. (ಆನರ್ಸ್) ಪದವಿ, 1947ರಲ್ಲಿ ಬೆಳಗಾವಿಯ ಲಾ ಕಾಲೇಜಿನಿಂದ ಎಲ್.ಎಲ್.ಬಿ. ಪದವಿ, 1948ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಅಹಮದಾಬಾದಿನ ಗುಜರಾತ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. 1949ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಗಿ ನೇಮಕಗೊಂಡರು. 1951ರಲ್ಲಿ ಸಹಾಯಕ ಕುಲಸಚಿವರಾಗಿ, 1957ರಲ್ಲಿ ಕುಲಸಚಿವರಾಗಿ, ...
READ MORE