‘ಜುಗಲಬಂದಿ ಚಿಂತಕ ಯು.ಆರ್. ಅನಂತಮೂರ್ತಿ’ ಕೃತಿಯು ಜಿ.ಕೆ. ರವೀಂದ್ರಕುಮಾರ್ ಅವರ ಕೃತಿ. ಯು.ಆರ್. ಅನಂತಮೂರ್ತಿ ಕುರಿತ ಬರವಣಿಗೆಯಾಗಿದೆ. ಕೃತಿಯಲ್ಲಿಯ ಕೆಲವೊಂದು ವಿಚಾರಗಳು ಹೀಗೆ ವಿಶ್ಲೇಷಿತವಾಗಿದೆ : ಅನಂತಮೂರ್ತಿ ಷೇಕ್ ಆಗಿರುವರೆ ಎಂಬ ಪ್ರಶ್ನೆಯಿಂದ ಹಿಡಿದು, ತಮ್ಮ ಕುರಿತ ಟೀಕೆ ಟಿಪ್ಪಣಿಗಳಲ್ಲಿ ಅವರು ಕಳೆದುದೆಷ್ಟು ಬೆಳೆದುದೆಷ್ಟು ಎಂಬ ಪ್ರಶ್ನೆಯ ತನಕ ರವೀಂದ್ರಕುಮಾರ್ ಅವರ ಕೃತಿ ವಸ್ತುನಿಷ್ಟವಾಗಿದೆ. ಒಬ್ಬ ಲೇಖಕನನ್ನು ಇಷ್ಟು ಸಮಗ್ರವಾಗಿ ಮೆಚ್ಚಿಕೊಳ್ಳುತ್ತಲೇ `ಕೋರ್ಟ್ ಮಾರ್ಷಲ್’‘ ಮಾಡುವ ಅಪರೂಪದ ಕೃತಿ ಇದಾಗಿದೆ.
ಮೂಲತ: ಚಿತ್ರದುರ್ಗ ಜಿಲ್ಲೆಯವರಾದ ಜಿ.ಕೆ.ರವೀಂದ್ರಕುಮಾರ್ ಶಿಕ್ಷಣ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆಕಾಶವಾಣಿಯ ಭದ್ರಾವತಿ, ಧಾರವಾಡ, ಕಾರವಾರ, ಮಡಿಕೇರಿ, ಮೈಸೂರು ಕೇಂದ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಹಾಗೂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. `ಸಿಕಾಡ', 'ಪ್ಯಾಂಜಿಯ', 'ಕದವಿಲ್ಲದ ಊರಲ್ಲಿ', 'ಒಂದುನೂಲಿನ ಜಾಡು' ಹಾಗು 'ಮರವನಪ್ಪಿದ ಬಳ್ಳಿ' ಕವನ ಸಂಕಲನಗಳನ್ನು ಪ್ರಕಟಿಸಿದ್ದು, ರವೀಂದ್ರ ಕುಮಾರ್ ಅವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಹಾಗು ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪುರಸ್ಕಾರ ಲಭಿಸಿದೆ. ಅಲ್ಲದೆ ಕಾಂತಾವರದ ...
READ MORE