ಅಪರೂಪದ ಗಾಂಧಿವಾದಿ, ಸಮಾಜ ಸೇವಕರಾಗಿದ್ದ ಸುರೇಂದ್ರ ಕೌಲಗಿಯವರ ಜೀವನ ಸಾಧನೆಗಳ ಕುರಿತಾದ ಲೇಖನಗಳ ಸಂಗ್ರಹ ರೂಪವೇ ’ ಅಭಿನವ ರಂತಿದೇವ’.
ಸುಮನ ವಿಶ್ವನಾಥ್ ಅವರ ಆದರ್ಶಗಳ ಬೆನ್ನು ಹತ್ತಿ, ಕೆ.ಆರ್ ಮೋಹನ್ ಬರೆದಿರುವ ಅಭಿನವ ರಂತಿದೇವ, ಮತ್ತು ಕೆ.ಪಿ ಸುರೇಶ್ ಅವರ ದಾದಾ ಎಂಬ ದೀಪ ಲೇಖನಗಳು ಸುರೇಂದ್ರ ಕೌಲಗಿ ಅವರ ಜೀವನ ದರ್ಶನವನ್ನು ತಿಳಿಸುವಂತದ್ದು.
ಜನಪದ ನಿಲಯದ ಅಂತರಂಗದಲ್ಲಿ, ಸರ್ವೋದಯ ಆಂದೋಲನದ ಮುನ್ನಡೆ, ಖಾದಿ ವಿಚಾರ, ಕೈಮಗ್ಗ ಉದ್ಯೋಗವನ್ನು ಸರ್ಕಾರ ನಾಶ ಮಾಡದಿರಲಿ, ಎಂಬ ಸುರೇಂದ್ರ ಕೌಲಗಿ ಅವರ ಬರಹಗಳನ್ನು ಈ ಕೃತಿ ಒಳಗೊಂಡಿದೆ.